ಬೆಂಗಳೂರು: ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ದಾಖಲೆ ನಿರ್ಮಿಸಿದ ಕೆಜಿಎಫ್ ಚಾಪ್ಟರ್ 2 ಟೀಸರ್. ಈಗಾಗಲೇ ಚಿತ್ರದ ಟೀಸರ್ ವೀಕ್ಷಣೆಯ ಸಂಖ್ಯೆ 122 ಮಿಲಿಯನ್ ದಾಟಿದ್ದು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನ ಪಡೆದಿದೆ.
ಗುರುವಾರ ರಾತ್ರಿ 9-29ಕ್ಕೆ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2 ಟೀಸರ್ ಇಲ್ಲಿಯವರೆಗೂ 6 ಲಕ್ಷ 90 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದಿದ್ದು, 5.07 ಲಕ್ಷ ಕಾಮೆಂಟ್ ಗಳು ಬಂದಿವೆ. ಪ್ರತೀ ಸೆಕೆಂಡ್ ಗೆ ಕೆಜಿಫ್ ಚಾಪ್ಟರ್ 2 ಟೀಸರ್ ಸುಮಾರು ಒಂದೂವರೆ ಸಾವಿರ ವೀಕ್ಷಣೆ ಪಡೆಯುತ್ತಿದೆ ಎಂದು ಹೇಳಲಾಗುತ್ತದೆ.
ಈ ಮೂಲಕ ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅತಿ ವೇಗವಾಗಿ ಎಲ್ಲರಿಂದ ವೀಕ್ಷಿಸಲ್ಪಟ್ಟ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಟೀಸರ್ ಪಡೆದಿರುವ ಖ್ಯಾತಿಯನ್ನು ಆಧರಿಸಿ ಈ ಸಿನಿಮಾ ಭಾರತೀಯ ಸಿನಿ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆಯುತ್ತದೆ ಎಂದು ಹೇಳಲಾಗುತ್ತದೆ.
ಅಷ್ಟೇ ಅಲ್ಲದೆ ಹೀಗಾಗಿ ಇನ್ನು ಕೆಲವೇ ಗಂಟೆಗಳಲ್ಲಿ ಕೆಜಿಎಫ್ 2 ಟೀಸರ್ ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಟೀಸರ್ ಎಂಬ ಖ್ಯಾತಿ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಇಲ್ಲ ಎಂದು ಹೇಳಲಾಗುತ್ತದೆ.