ಮಂಗಳೂರು: ಬಹುನಿರೀಕ್ಷಿತ ತುಳು ಸಿನಿಮಾ ಗಮ್ಜಾಲ್ ಫೆಬ್ರವರಿ 19ರಂದು ತೆರೆಯ ಮೇಲೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಚಿತ್ರವನ್ನು ಆರ್ ಎಸ್ ಫಿಲ್ಮ್ಸ್, ಶೂಲಿನ್ ಫಿಲ್ಮ್ಸ್ ಹಾಗೂ ಮುಗ್ರೊಡಿ ಪ್ರೊಡಕ್ಷನ್ ಅವರ ಬ್ಯಾನರ್ ಅಡಿ ನಿರ್ಮಿಸಲಾಗಿದ್ದು, ನವೀನ್ ಶೆಟ್ಟಿ ಹಾಗೂ ಸುಮನ್ ಸುವರ್ಣ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ.
ಈ ಚಿತ್ರದಲ್ಲಿ ಜನಪ್ರಿಯ ಕೋಸ್ಟಲ್ ವುಡ್ ನಟರಾದ ನವೀನ್ ಡಿ ಪಡೀಲ್ , ಭೋಜರಾಜ್ ವಾಮಂಜೂರ್ , ಅರವಿಂದ್ ಬೋಳಾರ್ , ಪ್ರಸನ್ನ ಶೆಟ್ಟಿ ಬೈಲೂರು , ಸಂದೀಪ್ ಶೆಟ್ಟಿ , ಕರಿಷ್ಮಾ ಮತ್ತು ಇತರ ನಟರು ನಟಿಸಿದ್ದಾರೆ. ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಖ್ಯಾತ ನಟ – ನಿರ್ದೇಶಕ ರೂಪೇಶ್ ಶೆಟ್ಟಿ ಬರೆದಿದ್ದಾರೆ. ಹಾಗೇ ಜೋಯಲ್ ರೆಬೆಲ್ಲೊ ಮತ್ತು ಡ್ಯಾರೆಲ್ ಮಸ್ಕರೇನ್ಹಾಸ್ ಸಂಗೀತ ಸಂಯೋಜಿಸಿದ್ದಾರೆ .
ಲಾಕ್ ಡೌನ್ ಅವಧಿಯಲ್ಲಿ ಗಮ್ಯಾಲ್ ಚಿತ್ರವನ್ನು ಚಿತ್ರೀಕರಿಸಲಾಗಿದೆ ಹಾಗೂ 2 ಚಲನಚಿತ್ರಗಳ ಪ್ಯಾಕೇಜ್ ಎಂಬ ಟ್ಯಾಗ್ ಲೈನ್ ಹೊಂದಿರುವುದು ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಲು ಕಾರಣವಾಗಿದೆ . ಚಲನಚಿತ್ರವು ಸಂಪೂರ್ಣ ಮನರಂಜನೆ ಹೊಂದಿದೆ ಎನ್ನಲಾಗಿದೆ .