News Kannada
Friday, December 02 2022

ಮನರಂಜನೆ

ಮಹಾನ್ ಹುತಾತ್ಮ; ರಾಷ್ಟ್ರ ಪ್ರಶಸ್ತಿ ವಿಜೇತ ಕಿರುಚಿತ್ರ ಏಪ್ರಿಲ್ 9ಕ್ಕೆ ಬಿಡುಗಡೆ

Photo Credit :

ಮಹಾನ್ ಹುತಾತ್ಮ; ರಾಷ್ಟ್ರ ಪ್ರಶಸ್ತಿ ವಿಜೇತ ಕಿರುಚಿತ್ರ ಏಪ್ರಿಲ್ 9ಕ್ಕೆ ಬಿಡುಗಡೆ

2018ರಲ್ಲಿ ಅತ್ಯುತ್ತಮ ಕಿರುಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ, ಮಹಾನ್ ಹುತಾತ್ಮ ಕಿರುಚಿತ್ರ ಬಳಿಕ 20ಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಭಾಗವಹಿಸಿದೆ.

ಸುಮಾರು ಹತ್ತಕಿಂತಲು ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ‘ಮಹಾನ್‌ ಹುತಾತ್ಮ’ ಕಿರುಚಿತ್ರ ಏಪ್ರಿಲ್ 9 ರಂದು ಬಿಡುಗಡಯಾಗಲಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಪುತ್ರ ಸಾಗರ್ ಪುರಾಣಿಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಇದೇ ಏ. 9 ರಂದು ಎಂಎಚ್‌ ಫಿಲಂ.ಇನ್‌ ನಲ್ಲಿ ಪೇಡ್‌ ಪ್ರೀಮಿಯರ್‌ ಆಗಲಿದೆ. ರೂ.30 ನೀಡಿ ಕಿರುಚಿತ್ರವನ್ನು ವೀಕ್ಷಿಸಬಹುದಾಗಿದೆ.

ಅಕ್ಷಯ್ ಎಂಟರ್​ಟೈನ್ ಮೆಂಟ್ ಮತ್ತು ಪುರಾಣಿಕ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗಿರುವ ‘ಮಹಾನ್ ಹುತಾತ್ಮ’ ಕಿರುಚಿತ್ರ 2018ರಲ್ಲಿ, ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿತ್ತು.

ಅದಾದ ಬಳಿಕ 20ಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಅವಾರ್ಡ್ ಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ಕಿರುಚಿತ್ರದಲ್ಲಿ ಅಕ್ಷಯ್ ಹಾಗೂ ಅದ್ವಿತಿ ಶೆಟ್ಟಿ ಜೊತೆಗೆ ಹಿರಿಯ ನಟ ಶ್ರೀನಾಥ್, ಸಾಗರ್ ಪುರಾಣಿಕ್, ಅಚಿಂತ್ಯ ಪುರಾಣಿಕ್, ವರುಣ್ ಶ್ರೀನಿವಾಸ್, ಕುಲ್ದೀಪ್, ಮನೋಜ್, ಶಶಿಕುಮಾರ್, ಪೀಟರ್, ವರುಣ್ ಶ್ರೀನಿವಾಸ್ ರಾಜಗುರು ಸಹ ಅಭಿನಯಿಸಿದ್ದಾರೆ.

‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ಅಚಿಂತ್ಯ, ಈ ಚಿತ್ರದಲ್ಲಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ವೀಕ್ಷಕರ ಗಮನ ಸೆಳೆಯುತ್ತಾನೆ.

See also  ತುಳು ಭಾಷೆಯಿಂದ ಆರು ಭಾಷೆಗೆ ಡಬ್ ಆಗಲಿದೆ ಸಿನಿಮಾ; '21 ಗ್ರ್ಯಾಮ್ಸ್  ' ಚಿತ್ರ ತಂಡದ ಹೊಸ ಸಾಹಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು