News Kannada
Tuesday, November 29 2022

ಮನರಂಜನೆ

ಧನುಷ್ ನಟನೆಯ ಕರ್ಣನ್ ಸಿನಿಮಾಕ್ಕೆ ಪೈರಸಿ ಕಾಟ - 1 min read

Photo Credit :

ಧನುಷ್ ನಟನೆಯ ಕರ್ಣನ್ ಸಿನಿಮಾಕ್ಕೆ ಪೈರಸಿ ಕಾಟ

‘ಅಸುರನ್​’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಖುಷಿಯಲ್ಲಿದ್ದ ಧನುಷ್, ಅವರ ಹೊಸ ಸಿನಿಮಾ ‘ಕರ್ಣನ್​’ ಬಿಡುಗಡೆ ಮಾಡಿದ್ದಾರೆ. ಇಂದು (ಏ.9) ತೆರೆಕಂಡ ಈ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಅಚ್ಚರಿ ಏನೆಂದರೆ, ಸಿನಿಮಾ ತೆರೆಕಂಡ ಕೆಲವೇ ಗಂಟೆಗಳಲ್ಲಿ ಇದನ್ನು ಕದಿಯಲಾಗಿದೆ! ಹಲವು ಪೈರಸಿ ಜಾಲತಾಣಗಳಲ್ಲಿ ಈ ಚಿತ್ರ ಡೌನ್​ಲೋಡ್​ಗೆ ಲಭ್ಯವಿದೆ.

ಎಲ್ಲ ಭಾಷೆಯ ಚಿತ್ರರಂಗಗಳೂ ಕೊರೊನಾ ಭೀತಿಯಿಂದಾಗಿ ಸಂಕಷ್ಟದಲ್ಲಿವೆ. ಕೆಲವು ವರ್ಗದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಅದರ ಜೊತೆಗೆ ಶೇ.50 ಆಸನ ಮಿತಿ ಆದೇಶ ಕೂಡ ಜಾರಿ ಆಗಿದೆ. ಈ ಸಂಕಷ್ಟಗಳ ನಡುವೆ ಒಂದು ಸಿನಿಮಾ ಗೆಲ್ಲುವುದು ಸುಲಭವಲ್ಲ. ಅಂತಹ ಸಂದರ್ಭದಲ್ಲಿ ‘ಕರ್ಣನ್​’ ನಿರ್ಮಾಪಕರು ಧೈರ್ಯ ತೋರಿಸಿ ಈ ಸಿನಿಮಾವನ್ನು ಬಿಡುಗಡೆ ಮಾಡಿದ್ದರು.
ಆದರೆ ಅವರ ಶ್ರಮವೆಲ್ಲ ಈಗ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

ಪೈರಸಿ ಎಂಬುದು ಹೊಸ ಸಂಕಷ್ಟವೇನಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಪೈರಸಿ ಕಾಟ ಮಿತಿ ಮೀರಿದೆ. ಕಾನೂನು ಎಷ್ಟೇ ಬಿಗಿಯಾಗಿದ್ದರೂ, ನಿರ್ಮಾಪಕರು ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೂಡ ಅದಕ್ಕೆ ಎರಡರಷ್ಟು ಚಾಲಾಕಿತನದೊಂದಿಗೆ ಪೈರಸಿ ಮಾಡಲಾಗುತ್ತಿದೆ. ಲಾಕ್​ಡೌನ್​ ಬಳಿಕ ತೆರೆಕಂಡ ಎಲ್ಲಾ ದೊಡ್ಡ ಸಿನಿಮಾಗಳು ಕೂಡ ಪೈರಸಿ ಹಾವಳಿಗೆ ಬಲಿಯಾಗಿವೆ. ಈಗ ಧನುಷ್​ ನಟನೆ ಕರ್ಣನ್​ ಚಿತ್ರಕ್ಕೂ ಈ ಸಂಕಷ್ಟ ಎದುರಾಗಿದೆ.

ಇದೀಗ ಕರ್ಣನ್​ ಚಿತ್ರವನ್ನು ಟಾರ್ಗೆಟ್ ಮಾಡಿದ್ದು, ತಮಿಳ್​ ರಾಕರ್ಸ್​ ಮುಂತಾದ ವೆಬ್​ಸೈಟ್​ಗಳಲ್ಲಿ ಎಚ್​​ಡಿ ಕಾಪಿ ಸಿಗುತ್ತಿದೆ. ಇದರಿಂದ ಧನುಷ್​ ಚಿತ್ರಕ್ಕೆ ಬಾಕ್ಸ್​ ಆಫೀಸ್​ನಲ್ಲಿ ತೀವ್ರ ಹಿನ್ನಡೆ ಆಗುವ ಸಾಧ್ಯತೆ ಇದೆ.

See also  ತಾಂಡವ್ ವೆಬ್ ಸರಣಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ: ವರದಿ ಕೇಳಿದ ಕೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು