News Kannada
Monday, December 05 2022

ಮನರಂಜನೆ

ಖ್ಯಾತ ತೆಲುಗು ಚಿತ್ರನಟ ಪವನ್ ಕಲ್ಯಾಣ್ ಗೆ ಸೋಂಕು ದೃಢ

Photo Credit :

ಖ್ಯಾತ ತೆಲುಗು ಚಿತ್ರನಟ ಪವನ್ ಕಲ್ಯಾಣ್ ಗೆ ಸೋಂಕು ದೃಢ

ಹೈದರಾಬಾದ್ : ದೇಶದಲ್ಲಿ ಈಗಾಗಲೇ ಕೊರೋನಾ ಮಹಾಮಾರಿ ಯಥೇಚ್ಛವಾಗಿ ಹರಡುತ್ತಿದ್ದು, ಅನೇಕ ಮಂದಿ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಈ ಸೋಂಕಿಗೆ ತುತ್ತಾಗಿದ್ದಾರೆ. ಇದೀಗ ಖ್ಯಾತ ತೆಲುಗು ಚಿತ್ರನಟ ಪವನ್ ಕಲ್ಯಾಣ್ ಕೂಡ ಸೋಂಕಿಗೆ ತುತ್ತಾಗಿದ್ದಾರೆ .

 

 ಕಳೆದ ಕೆಲವು ದಿನಗಳಿಂದ ಈ ಸಂಬಂಧ ವದಂತಿ ಹರಡಿತ್ತು . ಇದೀಗ ಸೋಂಕಿಗೆ ತುತ್ತಾಗಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ . ಪವನ್ ಕಲ್ಯಾಣ್ ತಮ್ಮ ಫಾರ್ಮ್ ಹೌಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಪವನ್ ಕಲ್ಯಾಣ್ ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ . 

 

ಕಳೆದ 24 ಗಂಟೆಯಲ್ಲಿ 234,692 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ . ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,45,26,609 ಕ್ಕೆ ತಲುಪಿದೆ . ಕಳೆದ 24 ಗಂಟೆಯಲ್ಲಿ ಕೊರೋನಾದಿಂದ 1,341 ಮಂದಿ ಮೃತಪಟ್ಟಿದ್ದಾರೆ . ಮಾರಕ ಕೊರೋನಾ ಇದುವರೆಗೆ 1,75,649 ಮಂದಿಯ ಪ್ರಾಣ ಅಪಹರಿಸಿದೆ .

 

 ಕೊರೋನಾ ಸೋಂಕಿತರಾಗಿದ್ದ 1,26,71,220 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ . ದೇಶದ ವಿವಿಧ ಆಸ್ಪತ್ರೆಗಳಲ್ಲಿ 16,79,740 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ . ದೇಶದಲ್ಲಿ ಇದುವರೆಗೆ 11,99,37,641 ಮಂದಿಗೆ ಲಸಿಕೆ ನೀಡಲಾಗಿದೆ .

 

 

See also  ಬಾಲಿವುಡ್ ನಟಿ ರಕುಲ್ ಗೆ ಕರೋನಾ ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು