ಮುಂಬೈ : ಜೀತು ಜಾನ್ ಎಂದೇ ಖ್ಯಾತಿ ಪಡೆದಿದ್ದ ಯುಟ್ಯೂಬರ್ ಜಿತೇಂದ್ರನನ್ನು ಮುಂಬೈನ ಭಂದಪ್ ಠಾಣೆಯ ಪೊಲೀಸುರ ಭಾನುವಾರ ರಾತ್ರಿ ಬಂಧಿಸಿದ್ದಾರೆ.
ಭಾನುವಾರ ಜಿತೇಂದ್ರ ಅವರ ಪತ್ನಿ ಕೋಮಲ್ ಅಗರವಾಲ್ ಅವರು ಫ್ಯಾನ್ ಗೆ ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಕೋಮಲ್ ಅವರ ತಾಯಿ ಹಾಗೂ ಸಹೋದರಿ ಜಿತೇಂದ್ರ ವಿರುದ್ಧ ದೂರು ದಾಖಲಿಸಿದ್ದರಿಂದ ಐಪಿಸಿ ಸೆಕ್ಷನ್ 304, 323, 306 ಮತ್ತು 506 ನಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿದ್ದಾರೆ.
ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಕೋಮಲ್ ಹಾಗೂ ಜೀತೆಂದ್ರ ಓಡಿ ಹೋಗಿ ಮದುವೆ ಆಗಿದ್ದರು. ಆದರೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎರಡು ತಿಂಗಳಿನೊಳಗೆ ಕೋಮಲ್ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನು ಕೋಮಲ್ ಮೇಲೆ ಜಿತೇಂದ್ರ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದ. ಆದ್ದರಿಂದಲೇ ಆಕೆ ಸಾವನ್ನಪ್ಪಿದ್ದಾಳೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತಳ ಕುಟುಂಬದವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.