News Kannada
Saturday, December 03 2022

ಮನರಂಜನೆ

ತೆರಿಗೆ ಕಟ್ಟಲು ಆಗ್ತಿಲ್ಲ – ಅಳಲು ತೋಡಿಕೊಂಡ ಕಂಗನಾ

Photo Credit :

ತೆರಿಗೆ ಕಟ್ಟಲು ಆಗ್ತಿಲ್ಲ – ಅಳಲು ತೋಡಿಕೊಂಡ ಕಂಗನಾ

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್‍ರವರು ತೆರಿಗೆ ಕಟ್ಟಲು ಆಗುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.ಕೊರೊನಾ ವೈರಸ್ ತಡೆಗಟ್ಟಲು ಬಹುತೇಕ ರಾಜ್ಯಗಳಲ್ಲಿ ಲಾಕ್‍ಡೌನ್ ಘೋಷಿಸಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಲಾಕ್‍ಡೌನ್ ಕೇವಲ ಜನ ಸಾಮಾನ್ಯರ ಮೇಲಷ್ಟೇ ಅಲ್ಲದೆ ಸೆಲೆಬ್ರೆಟಿಗಳ ಜೀವನದ ಮೇಲೂ ಹೊಡೆತ ಬಿದ್ದಿದೆ. ಅನೇಕ ಕಲಾವಿರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಸದ್ಯ ಬಾಲಿವುಡ್ ನಟಿ ಕಂಗನಾ ರಣಾವತ್ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ಸಿನಿಮಾಗೆ ಏನಿಲ್ಲ ಅಂದರೂ ಕೋಟ್ಯಂತರ ರೂ. ಸಂಭಾವನೆ ಪಡೆಯುತ್ತಾರೆ. ಹೀಗಿದ್ದರೂ ಕಂಗನಾ ಕಳೆದ ವರ್ಷದ ತೆರಿಗೆಯಲ್ಲಿ ಅರ್ಧದಷ್ಟನ್ನು ಮಾತ್ರ ಪಾವತಿ ಮಾಡಿದ್ದು, ಈ ಬಾರಿ ನನಗೆ ತೆರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ನಟಿ ಕಂಗನಾ ರಣಾವತ್‍ರವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ, ನನ್ನ ಒಟ್ಟು ಆದಾಯದಲ್ಲಿ ಶೇ. 45ರಷ್ಟು ತೆರಿಗೆ ಪಾವತಿಸುತ್ತೇನೆ. ನಾನು ಅತೀ ಹೆಚ್ಚು ತೆರಿಗೆ ಪಾವತಿಸುವ ನಟಿಯಾಗಿದ್ದೇನೆ. ಆದರೆ ಕೆಲಸ ಇಲ್ಲದೆ, ಕಳೆದ ವರ್ಷ ಅರ್ಧದಷ್ಟು ತೆರಿಗೆಯನ್ನು ಪಾವತಿಸಿದ್ದೇನೆ. ಇದೀಗ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿದ್ದು, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಎಂದಿದ್ದಾರೆ.ನಾನು ತೆರಿಗೆ ಪಾವತಿಸುವುದು ತಡ ಮಾಡಿದರೆ ಸರ್ಕಾರ ನನಗೆ ಬಡ್ಡಿ ವಿಧಿಸುತ್ತದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಈ ಸಮಯ ನಮ್ಮೆಲ್ಲರಿಗೂ ಕಠಿಣವಾಗಿರಬಹುದು. ಆದರೆ ಎಲ್ಲರೂ ಒಂದಾದರೆ ಸಮಯಕ್ಕಿಂತ ಕಠಿಣವಾಗಬಹುದು ಎಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

See also  ನಿರ್ದೇಶಕ ಹ್ಯಾರಿಸ್ ಸಾವಿನ ಸುತ್ತ ಸಂಶಯದ ಹುತ್ತ: ಮರು ತನಿಖೆಗೆ ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು