NewsKarnataka
Sunday, January 23 2022

ಮನರಂಜನೆ

ಮತ್ತೇ ಶುರುವಾಗುತ್ತಿದೆ ‘ಎದೆ ತುಂಬಿ ಹಾಡುವೆನು’ ಸಂಗೀತ ಕಾರ್ಯಕ್ರಮ

ಈ ಹಿಂದೆ ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದ ಕನ್ನಡದ ಪ್ರಸಿದ್ಧ ‘ಎದೆ ತುಂಬಿ ಹಾಡುವೆನು’ಸಂಗೀತ ಕಾರ್ಯಕ್ರಮ ಮತ್ತೇ ಪ್ರಾರಂಭವಾಗಲಿದೆ. ಎಸ್‌ಪಿಬಿ ಅವರ ನೆನಪಿನೊಂದಿಗೆ ಸಂಗೀತದ ಹೊಳೆ ಹರಿಯಲಿದೆ.

ಆಗಸ್ಟ್ 14ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಈ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ‘ಎದೆ ತುಂಬಿ ಹಾಡುವೆನು’ಸಂಗೀತ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.

ಇದೀಗ ಹಲವು ವರ್ಷಗಳ ಬಳಿಕ ಎಸ್‌ಪಿಬಿ ಅವರ ಕಲ್ಪನೆಯಂತೆ ಹೊಸ ರೂಪದಲ್ಲಿ ಮತ್ತೇ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಮೂಲಕ ಹೊಸ ಪ್ರತಿಭೆಗಳು ಸಂಗೀತ ಲೋಕಕ್ಕೆ ಪರಿಚಯಗೊಳ್ಳಲಿದ್ದು, ಗಾಯಕ ರಾಜೇಶ್ ಕೃಷ್ಣನ್, ರಘುದೀಕ್ಷಿತ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಕಾರ್ಯಕ್ರಮದ ಜಡ್ಜ್‌ಗಳಿದ್ದಾರೆ.

ಇನ್ನೂ ಮುಂದೆ ಸಂಗೀತ ಪ್ರಿಯರಿಗೆ ಈ ಕಾರ್ಯಕ್ರಮ ಮನರಂಜನೆ ನೀಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149
Subscribe to our Brand New YouTube Channel

Subscribe Newsletter

Get latest news karnataka updates on your email.