ಶೇರ್‌ಷಾ ಚಿತ್ರವನ್ನು ಮೆಚ್ಚಿರುವ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪೋಷಕರು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ನಟನೆಯನ್ನು ಕೊಂಡಾಡಿದ್ದಾರೆ.
ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ ಶೇರ್‌ಷಾ ಮೂಡಿಬಂದಿದೆ. ಕ್ಯಾಪ್ಟನ್ ಬಾತ್ರಾ ಬದುಕು ಮತ್ತು ಅವರು ಕಾರ್ಗಿಲ್ ಯುದ್ಧವನ್ನು ಮುನ್ನೆಡೆಸಿದ ವಿವರಗಳು ಈ ಚಿತ್ರದಲ್ಲಿವೆ.
ಬಾತ್ರಾ ಅವರ ತಂದೆ ಗಿರಿಧರ್ ಲಾಲ್, ‘ಶೇರ್‌ಷಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನ ಪ್ರಕಾರ, ಸಿದ್ಧಾರ್ಥ್ ಮತ್ತು ಕಿಯಾರಾ ಒಳ್ಳೆಯ ಕೆಲಸ ಮಾಡಿದ್ದಾರೆ. ಸಿದ್ಧಾರ್ಥ್ ಅವರ ಎಂಟ್ರಿ ಅದ್ಬುತವಾಗಿದೆ. ವಿಷ್ಣುವರ್ಧನ್ ಚೆನ್ನಾಗಿ ನಿರ್ದೇಶಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ವಿಕ್ರಂ ಬಾತ್ರಾ ತಾಯಿ ಕಮಲಾ ಅವರೂ ಸಹ ಶೇರ್‌ಷಾ ಚಿತ್ರವನ್ನು ಮೆಚ್ಚಿದ್ದಾರೆ ಎಂದು ಗಿರಿಧರ್ ಲಾಲ್ ಹೇಳಿದ್ದಾರೆ.
ಸಿದ್ಧಾರ್ಥ ಅವರು ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಕ್ಯಾಪ್ಟನ್ ವಿಕ್ರಂ ಬಾತ್ರಾ ಮತ್ತು ಅವರ ಅವಳಿ ಸಹೋದರ ವಿಶಾಲ್ ಬಾತ್ರಾ ಅವರ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ‘ಶೇರ್‌ಷಾ’ ಅಮೆಝಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿದೆ.
ಮರಣೋತ್ತರವಾಗಿ ವಿಕ್ರಂ ಬಾತ್ರಾ ಅವರಿಗೆ ಪರಮ ವೀರ ಚಕ್ರ ಶೌರ್ಯ ಪ್ರಶಸ್ತಿ ನೀಡಲಾಗಿತ್ತು.