ಬೆಂಗಳೂರು: ಗೆಳತಿಯ ಮದುವೆ ಸಂಭ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದಾರೆ. ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದರು. ಗಣಪತಿ ದರ್ಶನ ಪಡೆಯದೆ ಪಯಣ ಪ್ರಾರಂಭ ಮಾಡಲ್ಲ ಎಂದು ಹೇಳಿದ್ದರು. ಇದೀಗ ಸ್ನೇಹಿತೆಯ ಮದುವೆ ಸಂಭ್ರಮದ ಫೋಟೋ ಶೇರ್ ಮಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಬಹು ಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳ ಚಿತ್ರೀಕರಣದ ನಡುವೆಯೂ ರಶ್ಮಿಕಾ ಗೆಳತಿಯ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಮದುವೆಯಲ್ಲಿ ರಶ್ಮಿಕಾ ಗುಲಾಬಿ ಬಣ್ಣದ ಜೆರಿ ಸೀರೆಯಲ್ಲಿ ಮಿಂಚಿದ್ದಾರೆ. ಮದುಮಗಳ ಜೊತೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಶ್ಮಿಕಾ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ.