News Kannada
Friday, September 30 2022

ಮನರಂಜನೆ

ಆತ್ಮಹತ್ಯೆಗೆ ಶರಣಾದ ಬೆಂಗಾಲಿ ರೂಪದರ್ಶಿ ನಟಿ ಬಿದಿಶಾ ಡಿ ಮಜುಂದಾರ್ - 1 min read

Photo Credit :

ಕೋಲ್ಕತ್ತಾ: ಬಂಗಾಳದ ಮನರಂಜನಾ ಉದ್ಯಮದಲ್ಲಿ ಮತ್ತೊಂದು ಆಘಾತಕಾರಿ ಸಾವು ಸಂಭವಿಸಿದೆ. ಟಿವಿ ನಟಿ ಪಲ್ಲವಿ ಡೇ ಅವರು ಕೋಲ್ಕತ್ತಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೆಲವು ದಿನಗಳ ನಂತರ, 21 ವರ್ಷದ ರೂಪದರ್ಶಿ-ನಟಿ ಬಿದಿಶಾ ಡಿ ಮಜುಂದಾರ್ ಅವರು ಬುಧವಾರ ಸಂಜೆ ಕೋಲ್ಕತ್ತಾದ ಡುಮ್‌ಡಮ್ ಪ್ರದೇಶದ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೇ 25 ರಂದು ನೆರೆಹೊರೆಯವರು ಬಾಗಿಲು ಒಡೆದು ಮನೆಗೆ ಪ್ರವೇಶಿಸಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಡೆಲ್ ಬಿದಿಶಾ ಕೋಲ್ಕತ್ತಾದ ಉತ್ತರದ ಉಪನಗರದವರು. ವಧುವಿನ ಮೇಕಪ್ ಫೋಟೋ ಶೂಟ್‌ಗಳಲ್ಲಿ ಜನಪ್ರಿಯ ಮುಖವಾಗಿದ್ದರು. ಬಿದಿಶಾ ಡಿ ಮಜುಂದಾರ್ ಅವರು 2021 ರಲ್ಲಿ ‘ಭಾರ್- ದಿ ಕ್ಲೌನ್’ ಎಂಬ ಕಿರುಚಿತ್ರದಲ್ಲಿ ಮೊದಲ ಬಾರಿ ನಟನೆಯಲ್ಲಿ ಕಾಣಿಸಿಕೊಂಡಿದ್ದರು.

ಮೃತದೇಹವನ್ನು ಈಗಾಗಲೇ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆರ್‌ಜಿಕೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆಕೆಯ ನಿವಾಸದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ನಟಿಯ ಆತ್ಮಹತ್ಯೆಗೆ ಕಾರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೃತ್ತಿ ಅವಕಾಶಗಳ ಕೊರತೆಯಿಂದಾಗಿ ತಾನು ಈ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.

See also  ನಟ ದರ್ಶನ್ ಅಭಿನಯದ ಒಡೆಯರ್ ಚಿತ್ರದ ವಿರುದ್ಧ ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು