News Kannada
Friday, December 09 2022

ಮನರಂಜನೆ

ಹೈದರಾಬಾದ್: ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ತಾಯಿ ನಿಧನ

Tollywood star Mahesh Babu
Photo Credit : Facebook

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಾಯಿ ಘಟ್ಟಮಾನೇನಿ ಇಂದಿರಾ ದೇವಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ಬೆಳಿಗ್ಗೆ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಕಳೆದ ವಾರದಿಂದ ನಗರದ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಂದಿರಾ ದೇವಿ ಮನೆಯಲ್ಲಿ ಕೊನೆಯುಸಿರೆಳೆದರು. ಅವರು ಪತಿ ಮತ್ತು ತೆಲುಗಿನ ಹಿರಿಯ ನಟ ಕೃಷ್ಣ, ಅವರ ಮಗ ಮಹೇಶ್ ಬಾಬು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅವರ ಸಾವು ಈ ವರ್ಷ ಘಟ್ಟಮನೇನಿ ಕುಟುಂಬವನ್ನು ಅಪ್ಪಳಿಸಿದ ಎರಡನೇ ದುರಂತವಾಗಿದೆ. ಅವರ ಹಿರಿಯ ಮಗ ರಮೇಶ್ ಬಾಬು ಈ ವರ್ಷದ ಆರಂಭದಲ್ಲಿ ನಿಧನರಾಗಿದ್ದರು.

ಬುಧವಾರ ಸೂಪರ್ ಸ್ಟಾರ್ ಅವರ ಮನೆಯನ್ನು ಶೋಕದ ಛಾಯೆ ಆವರಿಸಿದೆ. ಸಾಮಾಜಿಕ ಮಾಧ್ಯಮದ ಮೂಲಕ ಕುಟುಂಬಕ್ಕೆ ಶ್ರದ್ಧಾಂಜಲಿ ಮತ್ತು ಸಂತಾಪ ಸಂದೇಶಗಳು ಹರಿದುಬರಲು ಪ್ರಾರಂಭಿಸಿವೆ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರು ಮಹೇಶ್ ಬಾಬು ಮತ್ತು ಕೃಷ್ಣ ಅವರಿಗೆ ಸಂತಾಪ ಸೂಚಿಸಿದವರಲ್ಲಿ ಮೊದಲಿಗರು. “ಇಂದಿರಾ ದೇವಿ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಸೂಪರ್ ಸ್ಟಾರ್ ಕೃಷ್ಣ, ಸಹೋದರ ಮಹೇಶ್ ಬಾಬು ಮತ್ತು ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳನ್ನು ತಿಳಿಸುತ್ತೇನೆ” ಎಂದು ಅವರು ತೆಲುಗಿನಲ್ಲಿ ಟ್ವೀಟ್ ಮಾಡಿದ್ದಾರೆ.

ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

See also  ನ್ಯೂಯಾರ್ಕ್: ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿದ ಐಸಿಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು