ಮೈಸೂರು: ಸಂಗೀತ ಭಾರತದ ಶ್ರೇಷ್ಠ ಮೂಲಕಲೆ ಎಂದು ಚಲನಚಿತ್ರ ನಟ ಅರುಣ್ ಸಾಗರ್ ಹೇಳಿದರು.
ನಗರದ ಜೆ ಎಲ್ ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ತಾಳವಾದ್ಯ ಪ್ರತಿಷ್ಠಾನ ಟ್ರಸ್ಟ್ 16 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಲಾಪೋಷಕರಿಗೆ ಕಲಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಆರೋಗ್ಯ, ಸಂಸ್ಕೃತಿ ಜೀವನ, ಶಿಸ್ತು ಮೂಡಿಸುವಲ್ಲಿ ಸಂಗೀತವು ದೊಡ್ಡ ಪಾತ್ರ ವಹಿಸುತ್ತದೆ. ಸಾಂಸ್ಕೃತಿಕ ರಾಜಧಾನಿ ಮೈಸೂರು ಕಲಾವಿದರ ತವರೂರು ಇದಕ್ಕೆ ಸಂಗೀತದ ಶಕ್ತಿಯೇ ಕಾರಣ. ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ. ಶಂಖನಾದ ಶಾಸ್ವಕೋಶ ಶುದ್ಧಿ ಮಾಡುತ್ತದೆ. ಜನಪದ ಶೈಲಿ ಉತ್ತಮ ಆರೋಗ್ಯಕ್ಕೆ ಸಹಕಾರಿ ವೇದಮಂತ್ರ ಮೆದುಳಿಗೆ ಶಕ್ತಿ ಹೆಚ್ಚಿಸುತ್ತದೆ. ಹಿಂದೂಸ್ತಾನಿ ಕರ್ನಾಟಿಕ್ ಸಂಗೀತ ಪ್ರದರ್ಶನಕ್ಕೆ ವಿದೇಶಗಳಲ್ಲಿ ಗೌರವವಿದೆ.
ಸಂಗೀತ ಪ್ರಕಾರದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳನ್ನು ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿದರೆ ಮುಂದಿನ ಅವರ ಭವಿಷ್ಯ ಉಜ್ವಲವಾಗಿರುತ್ತದೆ . ಹಿಂದೆ ಕಾಲದಲ್ಲಿ ಜನರು ಆಕಾಶವಾಣಿ ದೂರದರ್ಶನದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದರು, ಅದರಿಂದ ಮನಃಶಾಂತಿ ಹೆಚ್ಚಿತ್ತು ಎಂದು ಸ್ಮರಿಸಿದರು.
ಇದೇ ಸಂದರ್ಭ ಪ್ರತಿಭಾನ್ವಿತಾ ಸಾಧಕರಾದ ಅರುಣ್ ಸಾಗರ್ (ಚಲನಚಿತ್ರ ನಟರು, ರಂಗಭೂಮಿ ಕಲಾವಿದರು, ಶಿವಾಜಿ ರಾವ್ ಜಾದವ್, ಚಲನಚಿತ್ರ ನಟರು ರಂಗ ಭೂಮಿ ಕಲಾವಿದರು, ವಿಕ್ರಮ್ ಅಯ್ಯಂಗಾರ್, ಸಮಾಜ ಸೇವಕರು, ವಿದ್ವಾನ್ ಸಿ. ವಿಶ್ವನಾಥ್.
ಮಂಡೋಲಿನ್ ವಾದಕರು, ವಿದ್ವಾನ್ ದತ್ತಾತ್ರೇಯ, ಕೊಳಲು ವಾದಕರು, ಪಂಡಿತ್. ಭೀಮಾ ಶಂಕರ್ ಬಿದನೂರು, ತಬಲಾ ವಾದಕರು, ವಿದ್ವಾನ್ ಪುಟ್ಟಸ್ವಾಮಿ, ಡೋಲು ವಾದಕರು, ವಿಧೂಷಿ ದೀಪಿಕಾ ಪಾಂಡುರಂಗಿ, ವಾಗ್ಮಿಗಳು, ದಾಸರು ಪದ ಗಾಯಕರು, ವಿಜಯ ರಾಘವೇಂದ್ರ, ನಾಯಕ ನಟರು. ವಿಜಯ್ ಅರಸ್ ಹಿನ್ನೆಲೆ ಗಾಯಕರು ಅವರಿಗೆ “ಕಲಾರತ್ನ “ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪೇಯಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಹೇಮಾನಂದೀಶ್, ಖ್ಯಾತ ಮನೋವೈದ್ಯೆ ಡಾ.ರೇಖಾ ಮನಶಾಂತಿ, ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಅಧ್ಯಕ್ಷರಾದ ಡಾ. ಸಿ ಆರ್ ರಾಘವೇಂದ್ರ ಪ್ರಸಾದ್, ಕ್ರೆಡಿಟ್ ಐ ವ್ಯವಸ್ಥಾಪಕ ಟ್ರಸ್ಟಿ ಎಂ.ಪಿ. ವರ್ಷ, ನಿರೂಪಕರಾದ ಅಜಯ್ ಶಾಸ್ತ್ರಿ, ಉಪಾಧ್ಯಕ್ಷರಾದ ಆರ್ ಮಂಗಳ ಇನ್ನಿತರರು ಭಾಗವಹಿಸಿದ್ದರು