ಹೈದರಾಬಾದ್: ‘ಆರ್‌ಆರ್‌ಆರ್’ ಸ್ಟಾರ್ ರಾಮ್ ಚರಣ್ ಅವರು ಧಾರ್ಮಿಕ ನಂಬಿಕೆ ಹೊಂದಿರುವ ವ್ಯಕ್ತಿ ಎಂದು ಹೆಸರುವಾಸಿಯಾಗಿದ್ದಾರೆ. ಅವರು ಪ್ರಯಾಣಿಸುವಾಗಲೆಲ್ಲಾ ದೇವತೆಗಳನ್ನು ಹೊಂದಿರುವ ಪೋರ್ಟಬಲ್ ದೇವಸ್ಥಾನವನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಅವರು ಆಸ್ಕರ್‌ಗಾಗಿ ಲಾಸ್ ಏಂಜಲೀಸ್‌ಗೆ ಹೋದ ವೇಳೆಯೂ ಇದನ್ನು ಕೊಂಡೊಯ್ದಿದಿದ್ದರು.
“ನಾನು ಎಲ್ಲಿಗೆ ಹೋದರೂ, ಒಂದು ಸಣ್ಣ ದೇವಾಲಯವನ್ನು ಕೊಂಡೊಯ್ಯುತ್ತೇನೆ. ಅದು ನಮ್ಮ ಶಕ್ತಿ ಮತ್ತು ಭಾರತಕ್ಕೆ ನಮ್ಮನ್ನು ಸಂಪರ್ಕಿಸುತ್ತದೆ” ಎಂದು ರಾಮ್ ಚರಣ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ. ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಅವರು ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಈ ಹಿಂದೆಯೂ ಸಹ ರಾಮ್ ಚರಣ್ ಅವರ ಭಕ್ತಿಯ ಮನೋಭಾವವನ್ನು ನೆಟಿಜನ್‌ಗಳು ಮೆಚ್ಚಿದ್ದಾರೆ. ಅವರು ಈ ಹಿಂದೆ ತಮ್ಮ ವಾರ್ಷಿಕ ಅಯ್ಯಪ್ಪ ದೀಕ್ಷೆ ಕೈಗೊಂಡಿದ್ದರು. ಆ ವೇಳೆ ಅವರು 40 ದಿನಗಳವರೆಗೆ ಕಪ್ಪು ಬಟ್ಟೆಗಳನ್ನು ಧರಿಸಿದ್ದು, ಬರಿಗಾಲಿನಲ್ಲಿನಡೆದು ಮಾಂಸಾಹಾರವನ್ನು ತ್ಯಜಿಸಿದ್ದರು.