ಮುಂಬೈ: ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಅಭಿನಯದ ‘ಬವಾಲ್’ ಚಿತ್ರದ ನಿರ್ಮಾಪಕರು ಚಲನಚಿತ್ರವನ್ನು ಅಕ್ಟೋಬರ್ 6 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಚಲನಚಿತ್ರ ನಿರ್ಮಾಪಕರಾದ ಸಾಜಿದ್ ನಾಡಿಯಾಡ್ವಾಲಾ ಮತ್ತು ನಿತೇಶ್ ತಿವಾರಿ ‘ಬವಾಲ್ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ‘ಬವಾಲ್’ ಬಿಡುಗಡೆಯನ್ನು ಕಾರಣಾಂತರಗಳಿಂದ ಮಂದೂಡಲಾಗಿದೆ.
ಈ ಮೊದಲು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಚಿತ್ರದ ವಿಎಫ್‌ಎಕ್ಸ್ ಮತ್ತು ಇತರ ತಾಂತ್ರಿಕ ಅಡಚಣೆ ಚಿತ್ರಬಿಡುಗಡೆ ತಡವಾಗಲು ಕಾರಣ ಎಂದು ಹೇಳಲಾಗಿದೆ. ‘ಬವಾಲ್’ ಅನ್ನು ನಾಡಿಯಾಡ್ವಾಲಾ ಮೊಮ್ಮಗನ ಬ್ಯಾನರ್ ಅಡಿಯಲ್ಲಿ ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದಾರೆ.