ಚೆನ್ನೈ, ಮಾರ್ಚ್ 24: ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರ ತಂದೆ ಪಿ.ಎಸ್.ಮಣಿ (75) ಶುಕ್ರವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಅಜಿತ್ ಕುಮಾರ್ ಸೇರಿದಂತೆ ಅವರ ಪುತ್ರರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪಿ.ಎಸ್.ಮಣಿ ದೀರ್ಘಕಾಲದ ಅನಾರೋಗ್ಯದ ನಂತರ ನಿದ್ರೆಯಲ್ಲಿ ನಿಧನರಾದರು. ಅಜಿತ್ ಕುಮಾರ್ ಅವರ ಮ್ಯಾನೇಜರ್ ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಮೃತರು ಪತ್ನಿ ಮೋಹಿನಿ, ಪುತ್ರರಾದ ಅನೂಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್ ಅವರನ್ನು ಅಗಲಿದ್ದಾರೆ.
ಅಂತಿಮ ವಿಧಿಗಳು ಕುಟುಂಬ ವ್ಯವಹಾರವಾಗಿರುತ್ತದೆ ಎಂದು ಹೇಳಿದ ಅವರ ಪುತ್ರರು ತಮ್ಮ ಹಿತೈಷಿಗಳಿಗೆ ‘ಖಾಸಗಿಯಾಗಿ ದುಃಖಿಸಲು ಮತ್ತು ತಮ್ಮ ತಂದೆಯ ಸಾವನ್ನು ಸಾಧ್ಯವಾದಷ್ಟು ಸಮಚಿತ್ತದಿಂದ ಮತ್ತು ಘನತೆಯಿಂದ ಎದುರಿಸಲು’ ತಮ್ಮ ಇಚ್ಛೆಗಳನ್ನು ಗೌರವಿಸಬೇಕೆಂದು ವಿನಂತಿಸಿದರು.
ಅಜಿತ್ ಕುಟುಂಬಕ್ಕೆ ನಟ ಶರತ್ ಕುಮಾರ್ ಸಂತಾಪ ಸೂಚಿಸಿದ್ದಾರೆ.