News Kannada
Thursday, June 01 2023
ಮನರಂಜನೆ

“ವೊಡ್ತಾಂತ್ಲೆ ಫುಲ್” ಕೊಂಕಣಿ ಚಿತ್ರ ಏ.14 ರಂದು ತೆರೆಗೆ

Konkani film "Vodtantle Phul" to hit the screens on April 14
Photo Credit : News Kannada

ಬರೆಟ್ಟೊ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬಂದಿರುವ ಜಾನ್ ಸುನಿಲ್ ನಿರ್ಮಾಣದ, ಮೆಲ್ವಿನ್ ಎಲ್ಪೆಲ್ ನಿರ್ದೇಶನದ “ವೊಡ್ತಾಂತ್ಲೆ ಫುಲ್” ಎಂಬ ಕೊಂಕಣಿ ಚಿತ್ರ ಇದೇ ಬರುವ ಏ.14 ರಂದು ಮಂಗಳೂರಿನ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆಕಾಣಲಿದೆ.

ಈ ಚಿತ್ರವು ಮಂಗಳೂರು ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಈ ಚಿತ್ರದಲ್ಲಿ ಆಸ್ಕರ್ ಫರ್ನಾಂಡೀಸ್, ಸುನೀತಾ ಮರಿಯ, ಲೀಶಾ ಕರ್ಡೋಜ, ನೋರ್ಬರ್ಟ್ ಜಾನ್, ಸ್ಟಾನಿ ಅಲ್ವರಿಸ್, ಜೀವನ್ ವಾಸ್, ಸಂತೋಷ್ ಮುಲ್ಲೇರಿಯ, ಫಾ|| ಸಿರಿಲ್ ಲೋಬೋ, ಸಿ|| ಜೆಸಿಂತಾ ಬರೆಟ್ಟೋ , ಹ್ಯಾರಿ ಪ್ರವೀಣ್ ಕೊರೇಯ ಹಾಗೂ ಇತರರು ನಟಿಸಿದ್ದು.

ಈ ಚಿತ್ರದ ಕಥೆ ಮತ್ತು ಛಾಯಾಗ್ರಹಣ ದಿವಂಗತ ವಿಜಯ್ ಎಸ್. ಮತ್ತು ಡೆನೇಲ್ ಜೇಸನ್ ಮಾಡಿದ್ದು , ಚಿತ್ರಕಥೆ – ಸಹ ನಿರ್ದೇಶನ – ನೋರ್ಬರ್ಟ್ ಜಾನ್ ಹಾಗೂ ಹಾಗೂ ಸಂಕಲನ ರಘುನಾಥ್ ಎಲ್ ಹಾಗೂ ಸಹ ಸಂಕಲನ ಅರ್ವಿನ್ ಲೋಬೋ ಅವರು ಮಾಡಿದ್ದಾರೆ.

ಈ ಚಿತ್ರಕ್ಕೆ ಅರ್ಜುನ್ ಲೂಯಿಸ್ ಅವರು ಸಾಹಿತ್ಯ ಬರೆದಿದ್ದು, ಡೊಲ್ವಿನ್ ಕೊಳಲಾಗಿರಿ ಅವರು ಸಂಗೀತ ನೀಡಿದ್ದಾರೆ. ಈ ಚಿತ್ರದ ಆಡಿಯೋ ರೈಟ್ಸ್ ಅನ್ನು ಜಸ್ಟ್ ರೋಲ್ ಫಿಲಂಸ್ ಯೂಟ್ಯೂಬ್ ಚಾನೆಲ್ ಅವರು ಪಡೆದುಕೊಂಡಿದ್ದಾರೆ.

ಈ ಚಿತ್ರವು ಕೌಟುಂಬಿಕ ಹಾಗೂ ಸಾಮಾಜಿಕ ಅರಿವು ಮೂಡಿಸುವ ಚಿತ್ರವಾಗಿದ್ದು. ಶಾಲೆಯ ಮಕ್ಕಳ ಮೇಲೆ ಬೀಳುವ ಶಿಕ್ಷಣದ ಒತ್ತಡ , ಹೆತ್ತವರ ನಿರ್ಲಕ್ಷಣ , ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ತಪ್ಪು ಸಂದೇಶಗಳಿಂದ ಉಂಟಾಗುವ ಪರಿಣಾಮ ಈ ಚಿತ್ರದ ಸಾರಾಂಶವಾಗಿದೆ.

ಈ ಚಿತ್ರವನ್ನು ಎಲ್ಲ ಮಾದ್ಯಮ ಬಂಧುಮಿತ್ರರು ಚಿತ್ರಮಂದಿರಗಳಲ್ಲಿ ಬಂದು ನೋಡಿ ಹಾಗೂ ಈ ಚಿತ್ರದ ಪ್ರಸಾರವನ್ನು ಮಾಡಿ ಸಹಕರಿಸಬೇಕಾಗಿ ಈ ಚಿತ್ರತಂಡವು ವಿನಂತಿಸಿಕೊಳ್ಳುತ್ತೇವೆ.

See also  ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು