ಡ್ರಗ್ಸ್ ಪ್ರಕರಣ: ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ವಿಚಾರಣೆ ಸಾಧ್ಯತೆ

ಡ್ರಗ್ಸ್ ಪ್ರಕರಣ: ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ವಿಚಾರಣೆ ಸಾಧ್ಯತೆ

Megha R Sanadi   ¦    Sep 21, 2020 04:00:37 PM (IST)
ಡ್ರಗ್ಸ್ ಪ್ರಕರಣ: ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ವಿಚಾರಣೆ ಸಾಧ್ಯತೆ

ಮುಂಬೈ: ರಿಯಾ ಚಕ್ರವರ್ತಿಯ ಫೋನ್‌ನಲ್ಲಿ ವಾಟ್ಸಾಪ್ ಚಾಟ್‌ಗಳ ತನಿಖೆಯಿಂದ ಸಿಕ್ಕಿರುವ ಹೆಸರುಗಳು ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್. ಈ ನಟಿಯರನ್ನೂ ಈ ವಾರ ವಿಚಾರಣೆಗೆ ಕರೆಯಬಹುದು ಎಂಬ ಮಾತುಗಳು ಕೇಳಿಬರುತ್ತದೆ.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆಗೆ ಸಂಬಂಧಿಸಿರುವ ವ್ಯಾಪಕವಾದ ಡ್ರಗ್ಸ್ ತನಿಖೆಯಲ್ಲಿ ಬಾಲಿಯುಡ್ ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಅವರನ್ನು ಈ ವಾರ ವಿಚಾರಣೆಗೆ ಕರೆಯಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.

ಸುಶಾಂತ್ ಸಿಂಗ್ ರಜಪೂತ್‌ಗೆ ಡ್ರಗ್ಸ್ ಆಯೋಜಿಸಿದ ಆರೋಪದ ಮೇಲೆ ಸೆಪ್ಟೆಂಬರ್ 9 ರಂದು ಬಂಧನಕ್ಕೊಳಗಾದ ನಟಿ ರಿಯಾ ಚಕ್ರವರ್ತಿಯನ್ನು ಪ್ರಶ್ನಿಸಿದಾಗ ಅವರ ಹೆಸರುಗಳು ಬಂದಿವೆ ಎಂದು ಹೇಳಲಾಗುತ್ತಿದೆ.

ರಿಯಾ ಚಕ್ರವರ್ತಿಯ ಮೊಬೈಲ್ ಫೋನ್‌ನಿಂದ ಮರುಪಡೆಯಲಾದ ವಾಟ್ಸಾಪ್ ಚಾಟ್ ಗಳ ಆಧಾರದ ಮೇಲೆ ಫೆಡರಲ್ ಏಜೆನ್ಸಿ ನೋಂದಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ವಾರದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಈ ನಟಿಯರಿಗೆ ಸಮನ್ಸ್ ನೀಡಬಹುದು ಎಂದು ಮೂಲಗಳು ತಿಳಿಸಿವೆ. 

"ರಿಯಾ ಚಕ್ರವರ್ತಿಯ ಮರುಪಡೆಯಲಾದ ವಾಟ್ಸಾಪ್ ಸಂದೇಶಗಳ ಆಧಾರದ ಮೇಲೆ ನೋಂದಾಯಿಸಲಾದ ಮೊದಲ ಪ್ರಕರಣದ ಪ್ರಾಥಮಿಕ ತನಿಖೆಯ ಸಮಯದಲ್ಲಿ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಸೇರಿದಂತೆ ಇತರ ಕೆಲವು ನಟರ ಹೆಸರುಗಳು ಬಂದಿವೆ. ಇವರಿಬ್ಬರನ್ನು ಈ ವಾರ ತನಿಖೆಗೆ ಹಾಜರಾಗಲು ಕೇಳಲಾಗುವುದು ಹಾಗೂ ಅವರಿಗೆ ಶೀಘ್ರದಲ್ಲೇ ಸಮನ್ಸ್ ನೀಡಲಾಗುವುದು" ಎಂದು ತನಿಖೆಯಲ್ಲಿ ಭಾಗಿಯಾದ ಅಧಿಕಾರಿಯೊಬ್ಬರು  ತಿಳಿಸಿದರು.