ಕಮಲ್ ಹಾಸನ್ ನಟನೆಯ ಚಿತ್ರದ ಶೂಟಿಂಗ್ ನಲ್ಲಿ ಕ್ರೇನ್ ಕುಸಿದು ಮೂವರು ದುರ್ಮರಣ

ಕಮಲ್ ಹಾಸನ್ ನಟನೆಯ ಚಿತ್ರದ ಶೂಟಿಂಗ್ ನಲ್ಲಿ ಕ್ರೇನ್ ಕುಸಿದು ಮೂವರು ದುರ್ಮರಣ

YK   ¦    Feb 20, 2020 11:38:49 AM (IST)
ಕಮಲ್ ಹಾಸನ್ ನಟನೆಯ ಚಿತ್ರದ ಶೂಟಿಂಗ್ ನಲ್ಲಿ ಕ್ರೇನ್ ಕುಸಿದು ಮೂವರು ದುರ್ಮರಣ

ಚೆನ್ನೈ: ಜನಪ್ರಿಯ ನಟ ಕಮಲ್ ಹಾಸನ್ ನಟನೆಯ ಇಂಡಿಯನ್ 2 ಚಿತ್ರದ ಶೂಟಿಂಗ್ ವೇಳೆ ಕ್ರೇನ್ ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಚಿತ್ರವನ್ನು ಖ್ಯಾತ ನಿರ್ದೇಶ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ.

ಘಟನೆಯಲ್ಲಿ ಸಹಾಯಕ ನಿರ್ದೇಶಕ ಕೃಷ್ಣ, ಪ್ರೊಡಕ್ಷನ್ ಅಸಿಸ್ಟೆಂಟ್ ಮಧು ಮತ್ತು ಆರ್ಟ್ ಅಸಿಸ್ಟೆಂಟ್ ಚಂದ್ರನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

10 ಮಂದಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನೈ ನಗರದ ಹೊರ ವಲಯದಲ್ಲಿ ಶೂಟಿಂಗ್ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.