ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ‘ದೇಯಿ ಬೈದೆತಿ’ ತುಳು ಚಿತ್ರ

ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ‘ದೇಯಿ ಬೈದೆತಿ’ ತುಳು ಚಿತ್ರ

YK   ¦    Feb 24, 2020 05:11:02 PM (IST)
ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ‘ದೇಯಿ ಬೈದೆತಿ’ ತುಳು ಚಿತ್ರ

ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಡೆಯುತ್ತಿರುವ 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ‘ದೇಯಿಬೈದೆತಿ’ ತುಳು ಚಿತ್ರ ಸ್ಥಾನ ಪಡೆದಿದೆ.

ಚಿತ್ರೋತ್ಸವವು ಇದೇ 26ರಿಂದ ಮಾರ್ಚ್‌ 4ರ ವರೆಗೆ ನಡೆಯಲಿದೆ. 60 ದೇಶಗಳ 225 ಸಿನಿಮಾಗಳ ಪ್ರದರ್ಶನವಿದ್ದು, ಸಂಕ್ರಿ ಮೋಷನ್ಸ್‌ ಪಿಚ್ಚರ್ಸ್‌ನ ಬ್ಯಾನರ್‌ನಡಿ ನಿರ್ಮಾಣವಾದ ಸೂರ್ಯೋದಯ ಪೆರಂಪಳ್ಳಿ ನಿರ್ದೇಶನದ ‘ದೇಯಿಬೈದೆತಿ’ ಕೂಡ ಪ್ರದರ್ಶನದ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.

2018ನೇ ಕ್ಯಾಲೆಂಡರ್‌ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಯ ಪ್ರಾದೇಶಿಕ ವಿಭಾಗದಲ್ಲಿ ಮೂರು ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿತ್ತು. ಉತ್ತಮ ಚಿತ್ರ, ಉತ್ತಮ ನಿರ್ದೇಶನ ಮತ್ತು ಉತ್ತಮ ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿ ದೊರಕಿತ್ತು.