ಆಸ್ಟ್ರೇಲಿಯಾ ಉದ್ಯಮಿಯನ್ನು ಮದುವೆಯಾದ ನಟಿ ನಿತ್ಯಾ ರಾಮ್

ಆಸ್ಟ್ರೇಲಿಯಾ ಉದ್ಯಮಿಯನ್ನು ಮದುವೆಯಾದ ನಟಿ ನಿತ್ಯಾ ರಾಮ್

YK   ¦    Dec 07, 2019 12:06:53 PM (IST)
ಆಸ್ಟ್ರೇಲಿಯಾ ಉದ್ಯಮಿಯನ್ನು ಮದುವೆಯಾದ ನಟಿ ನಿತ್ಯಾ ರಾಮ್

ನಟಿ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ರನ್ನು ಶುಕ್ರವಾರ ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಖಾಸಗಿ ಹೊಟೇಲ್ ನಲ್ಲಿ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ನಟಿ ನಿತ್ಯಾ ರಾಮ್ ಅವರು ಕೆಲವು ಧಾರವಾಹಿಗಳನ್ನು ಅಭಿನಯಿಸುತ್ತಿದ್ದಾರೆ. ಕುಟುಂಬ ಮೂಲಗಳ ಪ್ರಕಾರ, ಗೌತಮ್ ಅವರು ನಿತ್ಯಾ ರಾಮ್ ತಾಯಿಯ ಸ್ನೇಹಿತೆಯ ಮಗ ಎಂದು ಹೇಳಲಾಗಿದೆ.

ಇದು ಆರೆಂಜ್ ಮ್ಯಾರೇಜ್ ಆಗಿದ್ದು, ಇನ್ನೂ 5 ತಿಂಗಳು ನಿತ್ಯಾ ಸೀರಿಯಲ್ ಗಳಲ್ಲಿ ನಟಿಸುದಿಲ್ಲ ಎಂದು ಕುಟುಂಬ ಮೂಲಗಳಿಂದ ಹೇಳಲಾಗಿದೆ.