`ಸೈನೈಡ್ ಕಿಲ್ಲರ್ ಮಲ್ಲಿಕಾ’ ಸಿನಿಮಾ ತೆರೆಗೆ

`ಸೈನೈಡ್ ಕಿಲ್ಲರ್ ಮಲ್ಲಿಕಾ’ ಸಿನಿಮಾ ತೆರೆಗೆ

LK   ¦    Feb 26, 2021 09:38:17 AM (IST)
`ಸೈನೈಡ್ ಕಿಲ್ಲರ್ ಮಲ್ಲಿಕಾ’ ಸಿನಿಮಾ ತೆರೆಗೆ

ಮಂಡ್ಯ: ಇಡೀ ಭಾರತವನ್ನು ಬೆಚ್ಚಿಬೀಳಿಸಿದ್ದ ಪ್ರಥಮ ಮಹಿಳಾ ಸೈನೈಡ್ ಕಿಲ್ಲರ್ ಮಲ್ಲಿಕಾ ಒಂದು ಕಡೆಯಾದರೆ, ಮತ್ತೊಂದು ಭಾಗದಲ್ಲಿ ಸೈನೈಡ್ ಕಿಲ್ಲರ್ ಮೋಹನ. ಇವರಿಬ್ಬರ ಕಥಾನಕವನ್ನು  ಸೈನೈಡ್ ಮಲ್ಲಿಕಾ’ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿರುವ ನಿರ್ದೇಶಕ ಗುರು ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ, ನಿರ್ಮಾಣ ಮಾಡುವ ಜೊತೆಗೆ ಮೋಹನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ಮಲ್ಲಿಕಾ ದೇವರ ಭಕ್ತೆಯರನ್ನು ಗುರಿ ಮಾಡಿದರೆ, ಮೋಹನ್ ವಿವಾಹೇತರ ಮಹಿಳೆಯರನ್ನು ದೈಹಿಕವಾಗಿ ಬಳಸಿಕೊಂಡು ಕೊಲೆಮಾಡಿ ಆಭರಣಗಳನ್ನು ದೋಚುತ್ತಿದ್ದ. ಇಬ್ಬರು ಸೈನೈಡ್ ಕೊಟ್ಟು ಸಾಯಿಸುತ್ತಿರುವುದು ವಿಶೇಷ. ಇದೆಲ್ಲಾ ಮಾಹಿತಿಯನ್ನು ಕಲೆ ಹಾಕಿರುವ ನಿರ್ದೇಶಕ ಗುರು ದುರುಳರ ಕುರಿತಂತೆ ಚಿತ್ರಮಾಡಲು ಮನಸ್ಸುಮಾಡಿದ್ದು ಬಿಡುಗಡೆ ಹಂತದವರೆಗೂ ಬಂದಿದೆ. ಶುಕ್ರವಾರ  ದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶೀರ್ಷಿಕೆ ಪಾತ್ರದಲ್ಲಿ ಸಂಜನಾಪ್ರಕಾಶ್ ಇವರೊಂದಿಗೆ ಮಂಡ್ಯ ಮೂಲದವರೇ ಆದ ಶಂಕರಲಿಂಗೇಗೌಡ, ಮಂಜುಳ ಆಲದಹಳ್ಳಿ, ಸೌಮ್ಯ, ಸ್ವಾತಿ, ಭಾಸ್ಕರ್, ಸರಳ, ನಾಗರತ್ನ, ಅನಿತ ರಂಗಾಯಣ, ಕಿರಣ್ ತುಂಬಕೆರೆ ಇತರರೆ ಕಲಾವಿದರ ನಟನೆ ಇದೆ.

ನಿಜ ಜೀವನದಲ್ಲಿ ಸೈನೈಡ್ ಕಿಲ್ಲರ್ ಮೋಹನ ಹಾಗೂ ಸೈನೈಡ್ ಕಿಲ್ಲರ್ ಮಲ್ಲಿಕಾ  ಒಮ್ಮೆಯಾದರೂ ಸ್ಪಂದಿಸಿರುವುದಿಲ್ಲ. ಆದರೆ ಚಿತ್ರದಲ್ಲಿ ಅವರಿಬ್ಬರನ್ನು ಭೇಟಿ ಮಾಡಿಸಿದ್ದಾರೆ ನಿರ್ದೇಶಕ ಗುರು. ಅದಕ್ಕಾಗಿ ’ಮಲ್ಲಿಕಾ ಮೀಟ್ಸ್ ಮೋಹನ್’ಎಂಬ ಅಡಿ ಬರಹವಿದೆ. ಇಬ್ಬರು ಚಾಲಾಕಿ ಕೊಲೆಪಾತಕರು ಭೇಟಿಯಾದಾಗ ಏನಾಗುತ್ತದೆ ಎಂಬ ಕುತೂಹಲಕಾರಿ ಘಟನೆಗಳನ್ನು ತೆರೆಯ ಮೇಲೆ ತಂದಿದ್ದಾರೆ. ಇದಕ್ಕೂ ಮುನ್ನ ಅವರು ಓಡಾಡಿದ, ಅಪರಾಧ ಮಾಡಿದ ಸ್ಥಳಗಳಾದ ಮಂಗಳೂರು, ಬೆಂಗಳೂರು, ಮಂಡ್ಯ, ಮೈಸೂರು, ಮೇಲುಕೋಟೆ, ಹಾಸನ, ಮಡಕೇರಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಜೀವನದಲ್ಲಿ ದಿಢೀರ್ ಶ್ರೀಮಂತಳಾಗಬೇಕೆನ್ನುವ ದುರ್ಬುದ್ದಿ ಹೊಂದಿದ್ದ ಕೆಂಪಮ್ಮ ಮುಂದೆ ಮಲ್ಲಿಕಾ ಆಗಿದ್ದು ಹೇಗೆ ಎಂಬ ಅಂಶಗಳು ಇರಲಿದೆ. ಸಂಗೀತ ಶರವಣ, ಛಾಯಾಗ್ರಹಣ ಶಂಕರ್, ಸಂಕಲನ ವಿಜಯ್.ಎಂ.ಕುಮಾರ್ ಅವರದ್ದಾಗಿದೆ.