‘ಫ್ಯಾಂಟಮ್’ ಟೈಟಲ್ ಲೋಗೋ ಬುರ್ಜ್ ಖಲೀಫಾ ದಲ್ಲಿ ಬಿಡುಗಡೆ

‘ಫ್ಯಾಂಟಮ್’ ಟೈಟಲ್ ಲೋಗೋ ಬುರ್ಜ್ ಖಲೀಫಾ ದಲ್ಲಿ ಬಿಡುಗಡೆ

MS   ¦    Jan 21, 2021 07:16:59 PM (IST)
‘ಫ್ಯಾಂಟಮ್’ ಟೈಟಲ್ ಲೋಗೋ ಬುರ್ಜ್ ಖಲೀಫಾ ದಲ್ಲಿ ಬಿಡುಗಡೆ

ಬೆಂಗಳೂರು: ದುಬೈನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಸಿನಿಮಾ ಟೈಟಲ್ ಲೋಗೋ. 

ಜನವರಿ 31 ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ತುಂಬಲಿದ್ದು, ಈ ಪ್ರಯುಕ್ತ ಚಿತ್ರತಂಡ ಹೊಸತನವನ್ನು ಮರೆಯಲು ಮುಂದಾಗಿದೆ. ‘ಫ್ಯಾಂಟಮ್’ ಚಿತ್ರದ ಟೈಟಲ್ ಲೋಗೋ ಬುರ್ಜ್ ಖಲೀಫಾದಲ್ಲಿ ಬಿಡುಗಡೆಯಾಗುವ ಮೂಲಕ, ಬುರ್ಜ್ ಖಲೀಫಾದಲ್ಲಿ ಟೈಟಲ್ ಲೋಗೋ ಬಿಡುಗಡೆ ಮಾಡಿದ ಪ್ರಪಂಚದ ಮೊದಲ ಚಿತ್ರತಂಡ ಎಂಬ ಖ್ಯಾತಿಗೆ ಪಾತ್ರವಾಗಲಿದೆ.