ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವರುಣ್ ಧವನ್

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವರುಣ್ ಧವನ್

MS   ¦    Jan 15, 2021 05:14:09 PM (IST)
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವರುಣ್ ಧವನ್

ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಬಾಲಿವುಡ್'ನ ಖ್ಯಾತ ನಟ ವರುಣ್ ಧವನ್. ವರುಣ್ ಧವನ್ ಇದೆ ತಿಂಗಳ 24 ರಂದು ಹಸಮಣೆ ಏರುತ್ತಿದ್ದಾರೆ ಎಂದು ಹೇಳಲಾಗಿದೆ.

ಅಲಿಘಡದಲ್ಲಿ ಅವರ ಮದುವೆ ನಡೆಯಲಿದ್ದು , ಸಂಗೀತ ಸಮಾರಂಭ , ಮೆಹಂದಿ ಶಾಸ್ತ್ರ ಸೇರಿದಂತೆ ಎಲ್ಲಾ ಶಾಸ್ತ್ರ , ಸಂಪ್ರದಾಯಗಳೊಂದಿಗೆ ಜನವರಿ 22 ರಿಂದ 26 ರ ವರೆಗೆ ಮದುವೆ ಸಂಭ್ರಮ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಫ್ಯಾಷನ್ ಡಿಸೈನರ್ ಆಗಿರುವ ನತಾಶಾ ವರುಣ್ ಸ್ನೇಹಿತೆಯಾಗಿದ್ದರು ಎನ್ನಲಾಗಿದ್ದು, ಕೊರೋನಾ ಕಾರಣದಿಂದ 15-20ಜನರಿಗೆ ಮಾತ್ರ ಮದುವೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ .