ಹುಟ್ಟು ಹಬ್ಬದ ದಿನ ಅಭಿಮಾನಿಗಳಲ್ಲಿ ‘ಗೋಲ್ಡನ್ ಕ್ವೀನ್’ ಮನವಿ

ಹುಟ್ಟು ಹಬ್ಬದ ದಿನ ಅಭಿಮಾನಿಗಳಲ್ಲಿ ‘ಗೋಲ್ಡನ್ ಕ್ವೀನ್’ ಮನವಿ

YK   ¦    Sep 14, 2019 10:42:08 AM (IST)
ಹುಟ್ಟು ಹಬ್ಬದ ದಿನ ಅಭಿಮಾನಿಗಳಲ್ಲಿ ‘ಗೋಲ್ಡನ್ ಕ್ವೀನ್’ ಮನವಿ

ಬೆಂಗಳೂರು: ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಜಗದೀಶ ಇಂದು ತಮ್ಮ 26ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಆದರೆ ಈ ಹುಟ್ಟುಹಬ್ಬಕ್ಕೆ ಕಾರಣಾಂತರಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ. ಅಭಿಮಾನಿಗಳು ದೂರದಿಂದಲೇ ಹರಸಿ,ನಿಮ್ಮ ಪ್ರೀತಿ ಹಾರೈಕೆ ಹೀಗೇ ಇರಲಿ ಎಂದು ಇನ್ಸ್ ಸ್ಟಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

‘ನನ್ನ ಪ್ರೀತಿ ಅಭಿಮಾನಿಗಳೇ ನಿಮ್ಮಲ್ಲೊಂದು ಮನವಿ. ನಿಮಗೆಲ್ಲಾ ತಿಳಿದಿರುವ ಹಾಗೇ ನಾಳೆ ನನ್ನ ಜನ್ಮದಿನ. ಪ್ರತಿವರ್ಷ ದೂರದೂರುಗಳಿಂದ ಬಂದು ನನ್ನನ್ನು ನೀವು ಹರಸುತ್ತೀರಾ, ಶುಭಾಶಯಗಳನ್ನು ತಿಳಿಸುತ್ತೀರಾ. ನಿಮ್ಮ ಪ್ರೀತಿ ಅಭಿಮಾನವನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ. ಆದರೆ ಈ ಬಾರಿ ಕಾರಣಾಂತರಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ. ಹೀಗಾಗಿ ನೀವಿರುವ ಸ್ಥಳದಿಂದಲೇ ನನಗೆ ಶುಭ ಹಾರೈಸಿ ಎಂಬ ಕೋರಿಕೆ ನನ್ನದು. ನಿಮ್ಮ ಪ್ರೀತಿ, ವಿಶ್ವಾಸ ಸದಾ ಇರಲಿ, ನಿಮ್ಮ ಪ್ರೀತಿಯ ಅಮೂಲ್ಯ ಜಗದೀಶ್’ ಎಂದು ಬರೆದುಕೊಂಡಿದ್ದಾರೆ

ಅಮೂಲ್ಯ 2000 ಇಸವಿಯಲ್ಲಿ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದರು. 2007ರಲ್ಲಿ ಬಿಡುಗಡೆಗೊಂಡ ‘ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ಅಮೂಲ್ಯ ಹೆಚ್ಚು ಜನಮನ್ನಣೆ ಗಳಿಸಿದರು.

ಆ ನಂತರ ಚೈತ್ರದ ಚಂದ್ರಮ, ಪ್ರೇಮಿಸಂ, ನಾನು ನನ್ನ ಕನಸು, ಮನಸೋಲಾಜಿ, ಶ್ರಾವಣಿ ಸುಬ್ರಹ್ಮಣ್ಯ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ, ರಾಮ್ ಲೀಲಾ, ಮದುವೆಯ ಮಮತೆಯ ಕರೆಯೋಲೆ, ಕೃಷ್ಣ ರುಕ್ಕು, ಮಾಸ್ತಿಗುಡಿ, ಮುಗಳು ನಗೆ ಚಿತ್ರಗಳಲ್ಲಿ ನಟಿಸಿದರು. 2017ರಲ್ಲಿ ಉದ್ಯಮಿ ಜಗದೀಶ್ ಅವರನ್ನು ವರಿಸಿದ ಅಮೂಲ್ಯ  ಆ ನಂತರ ಸಾಮಾಜಿಕ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮದುವೆಯ ನಂತರ ಚಿತ್ರಗಳಿಗೆ ಬ್ರೇಕ್ ಕೊಟ್ಟು ವೈಯ್ಯಕ್ತಿಕ ಜೀವನದಲ್ಲಿ ತೊಡಗಿಸಿಸಿಕೊಂಡಿದ್ದಾರೆ.

 

More Images