ನಟಿ ರಾಗಿಣಿ ದ್ವಿವೇದಿ ಬಿಗ್ ಬಾಸ್-8ನ ಪ್ರಮುಖ ಆಕರ್ಷಣೆ

ನಟಿ ರಾಗಿಣಿ ದ್ವಿವೇದಿ ಬಿಗ್ ಬಾಸ್-8ನ ಪ್ರಮುಖ ಆಕರ್ಷಣೆ

HSA   ¦    Feb 25, 2021 09:24:06 AM (IST)
ನಟಿ ರಾಗಿಣಿ ದ್ವಿವೇದಿ ಬಿಗ್ ಬಾಸ್-8ನ ಪ್ರಮುಖ ಆಕರ್ಷಣೆ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ವಾಪಸ್ ಬಂದಿರುವ ನಟಿ ರಾಗಿಣಿ ದ್ವಿವೇದಿ ಈ ವರ್ಷದ ಬಿಗ್ ಬಾಸ್-8ರಲ್ಲಿ ಪ್ರಮುಖ ಆಕರ್ಷಣೆಯಾಗಲಿರುವರು.

ಈ ಋತುವಿನ ಬಿಗ್ ಬಾಸ್ ನಲ್ಲಿ ಸುನಿಲ್ ರಾವ್, ಸುಕೃತ, ಕಿರಣ್ ಸಹಿತ ಪ್ರಮುಖ ನಟ,ನಟಿಯರು ಭಾಗವಹಿಸುತ್ತಿದ್ದಾರೆ.

ಈ ವರ್ಷದ ಬಿಗ್ ಬಾಸ್ ನಲ್ಲಿ ಯಾವ ಸಾಮಾನ್ಯ ವ್ಯಕ್ತಿ ಅಥವಾ ರಾಜಕಾರಣಿಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ರಿಯಾಲಿಟಿ ಶೋ ವಿಜೇತ ಹನುಮಂತು ಅವರು ಈ ಶೋನ ಪ್ರಮುಖ ಆಕರ್ಷಣೆಯಾಗಲಿರುವರು.

ಫೆ.23ರಿಂದ ಎಲ್ಲಾ ಸ್ಪರ್ಧಿಗಳು ಕ್ವಾರೆಂಟೈನ್ ನಲ್ಲಿ ಇದ್ದಾರೆ ಮತ್ತು ಶೋಗೆ ಯಾವುದೇ ತೊಂದರೆ ಆಗದೆ ಇರುವಂತೆ ಅವರು ನೋಡಿಕೊಂಡಿರುವರು. ನಟ ಕಿಚ್ಚ ಸುದೀಪ್ ಅವರು ಈ ಶೋವನ್ನು ನಿರೂಪಿಸಲಿರುವರು.