11ತಿಂಗ್ಳ ಚಿಕಿತ್ಸೆ ಬಳಿಕ ಭಾರತಕ್ಕೆ ವಾಪಾಸ್ಸಾದ ರಿಷಿ ಕಪೂರ್

11ತಿಂಗ್ಳ ಚಿಕಿತ್ಸೆ ಬಳಿಕ ಭಾರತಕ್ಕೆ ವಾಪಾಸ್ಸಾದ ರಿಷಿ ಕಪೂರ್

YK   ¦    Sep 11, 2019 12:08:30 PM (IST)
11ತಿಂಗ್ಳ ಚಿಕಿತ್ಸೆ ಬಳಿಕ ಭಾರತಕ್ಕೆ ವಾಪಾಸ್ಸಾದ ರಿಷಿ ಕಪೂರ್

ನವದೆಹಲಿ: ಕ್ಯಾನ್ಸರ್ ವಿರುದ್ಧ ಹೋರಾಡಿ ನ್ಯೂಯಾರ್ಕ್ ನಲ್ಲಿ ಸತತ 11 ತಿಂಗಳ ಚಿಕಿತ್ಸೆ ಬಳಿಕ ನಟ ರಿಷಿ ಕಪೂರ್ (67) ಭಾರತಕ್ಕೆ ವಾಪಾಸ್ ಆಗಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಪತ್ನಿ ನೀತೂ ಜತೆ ಮುಂಬೈಗೆ ಆಗಮಿಸಿದ್ದಾರೆ.

ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಗೆ 11ತಿಂಗಳ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿ ಭಾರತಕ್ಕೆ ವಾಪಾಸ್ ಆಗಿದ್ದಾರೆ. ರಿಷಿ ಕಪೂರ್ ಟ್ವೀಟ್ ಮಾಡಿ, ‘ಬ್ಯಾಕ್ ಟು ಹೋಮ್” 11ತಿಂಗಳು,11ದಿನ, ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಮನೆಗೆ ವಾಪಾಸ್ಸಾದ ರಿಷಿಗೆ ಬೃಹತ್ ಬೆಲೂನ್ ನಲ್ಲಿ ‘ವೆಲ್ ಕಮ್ ಹೋಂ ಡಾಡ್’ಎ ಎಂದು ಬರೆದು ಮಕ್ಕಳು ಸ್ವಾಗತ ಕೋರಿದ್ದಾರೆ.

ರಿಷಿ ಕಪೂರ್ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಬಾಲಿವುಡ್ ಚಿತ್ರರಂಗ ಅವರೊಂದಿಗಿದೆ ಎಂದು ದೈರ್ಯ ತುಂಬಿತ್ತು. ಮಗ ರಣಬೀರ್ ಜತೆ ಹೆಸರು ತಳುಕು ಹಾಕಿಕೊಂಡಿರುವ ಆಲಿಯಾ ಭಟ್, ದೀಪಿಕಾ ಪಡುಕೋಣೆ, ನಟ ಶಾರುಖ್ ಖಾನ್, ಗೌರಿ ಖಾನ್ ಹಾಗೂ ಅಂಬಾನಿ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿಕೊಂಡು ಸಮಯಕಳೆದಿದ್ದರು.