ದೃಶ್ಯಂ ಸಿನಿಮಾ ನಿರ್ದೇಶಕ ನಿಶಿಕಾಂತ್ ಕಾಮತ್ ಗೆ ಗಂಭೀರ ಲಿವರ್ ಸಮಸ್ಯೆ

ದೃಶ್ಯಂ ಸಿನಿಮಾ ನಿರ್ದೇಶಕ ನಿಶಿಕಾಂತ್ ಕಾಮತ್ ಗೆ ಗಂಭೀರ ಲಿವರ್ ಸಮಸ್ಯೆ

HSA   ¦    Aug 12, 2020 05:16:25 PM (IST)
ದೃಶ್ಯಂ ಸಿನಿಮಾ ನಿರ್ದೇಶಕ ನಿಶಿಕಾಂತ್ ಕಾಮತ್ ಗೆ ಗಂಭೀರ ಲಿವರ್ ಸಮಸ್ಯೆ

ನವದೆಹಲಿ: ದೃಶ್ಯಂ ಸಿನಿಮಾದ ನಿರ್ದೇಶಕ ನಿಶಿಕಾಂತ್ ಕಾಮತ್ ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಹೈದರಾಬಾದ್ ನ ಗಾಚಚಿಬೌಲಿಯಲ್ಲಿರುವ ಏಶ್ಯನ್ ಇನ್ ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಂಟ್ರೊಲಾಜಿ(ಎಐಜಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಿವರ್ ಸಿರೋಸಿಸ್ ನಿಂದ ಅವರು ಬಳಲುತ್ತಿದ್ದು, ಜುಲೈ 31ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿನೆಮಾ ನಿರ್ದೇಶಕನ ಸ್ಥಿತಿಯು ಗಂಭೀರವಾಗಿದೆ. ಆದರೆ ಸ್ಥಿರವಾಗಿದೆ ಎಂದು ಎಐಜಿ ಆಸ್ಪತ್ರೆಯು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಹೇಳಿದೆ.

50ರ ಹರೆಯದ ನಿರ್ದೇಶಕ ಮರಾಠಿ ಸಿನೆಮಾ `ಡೊಂಬಿವಲಿ ಫಾಸ್ಟ್’ ನಲ್ಲಿ ನಟಿಸಿದ್ದರು. ಇದರ ಬಳಿಕ ಹಿಂದಿ ಸಿನಿಮಾ `ಹವಾ ಆನೆ ದೇ’(2004)ರಲ್ಲಿ ನಟಿಸಿದ್ದರು. 2006ರಲ್ಲಿ ಅವರಿಗೆ `ಡೊಂಬಿವಲಿ ಫಾಸ್ಟ್’ ಸಿನೆಮಾಕ್ಕಾಗಿ ರಾಷ್ಟ್ರೀಯ ಪುರಸ್ಕಾರವು ಸಿಕ್ಕಿತ್ತು.