ರೂಪದರ್ಶಿ ಮೆಬಿನಾ ಮೈಕೆಲ್ ರಸ್ತೆ ಅಪಘಾತದಲ್ಲಿ ಸಾವು

ರೂಪದರ್ಶಿ ಮೆಬಿನಾ ಮೈಕೆಲ್ ರಸ್ತೆ ಅಪಘಾತದಲ್ಲಿ ಸಾವು

HSA   ¦    May 27, 2020 11:32:45 AM (IST)
ರೂಪದರ್ಶಿ ಮೆಬಿನಾ ಮೈಕೆಲ್ ರಸ್ತೆ ಅಪಘಾತದಲ್ಲಿ ಸಾವು

ಮಂಡ್ಯ: ರೂಪದರ್ಶಿ ಮೆಬಿನಾ ಮೈಕೆಲ್(22) ಅವರು ಮಂಗಳವಾರ ಸಂಜೆ ಬೆಳ್ಳೂರು ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ದೇವಿಹಳ್ಳಿ ತಿರುವಿನಲ್ಲಿ ಟ್ರ್ಯಾಕ್ಟರ್ ಬಂದು ಕಾರಿಗೆ ಬಡಿದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಮೆಬಿನಾ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮೆಬಿನಾ ಕಾರಿನ ಚಾಲಕ ವಿನೋದ್ ಹಾಗೂ ಆಕೆಯ ಸ್ನೇಹಿತ ರಾಜು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಬಿನಾ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ನಾಲ್ಕನೇ ಆವೃತ್ತಿ ಗೆದ್ದಿದ್ದರು.

ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.