ರೈತನಿಂದ 60 ಚೀಲ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

ರೈತನಿಂದ 60 ಚೀಲ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

Ms   ¦    May 17, 2021 05:53:21 PM (IST)
ರೈತನಿಂದ 60 ಚೀಲ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

ಹಿರಿಯೂರು: ನಟ ಉಪೇಂದ್ರ ಈಗಾಗಲೇ ಹೇಳಿದಂತೆ ರೈತರಿಗೆ ಸಹಾಯ ಮಾಡಲು ಮುಂದಾಗಿದ್ದು, ತಾಲ್ಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಅವರು ಬೆಳೆದಿದ್ದ 60 ಚೀಲ ಈರುಳ್ಳಿಯನ್ನು ನಟ ಉಪೇಂದ್ರ ಖರೀದಿಸಿದ್ದಾರೆ.

 

ಲಾಕ್ ಡೌನ್ ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರಿಗೆ ನಟ ಉಪೇಂದ್ರ ಅವರು ” ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ” ಎಂದು ತನ್ನ ಮೊಬೈಲ್ ನಂಬರ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದರು. ಇದನ್ನು ಗಮನಿಸಿದ ಮಹೇಶ್ ಉಪೇಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿ ಈರುಳ್ಳಿಯನ್ನು ಕೊಂಡೊಯ್ದು ಮಾರಾಟ ಮಾಡಿ ಬಂದಿದ್ದಾರೆ. ನಟ ಉಪೇಂದ್ರ ಅವರು 60 ಚೀಲ, 3000 ಕೆಜಿ ಈರುಳ್ಳಿಗೆ ಬಾಡಿಗೆ ಸೇರಿಸಿ 37 ಸಾವಿರ ಹಣ ಕೊಟ್ಟು ಖರೀದಿಸಿ ಸಂಕಷ್ಟದಲ್ಲಿದ್ದ ರೈತನಿಗೆ ನೆರವಾಗಿದ್ದಾರೆ.

 

ನಾವು ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. 70 ಪ್ಯಾಕೆಟ್ ಆಗಿದ್ದವು ಅದರಲ್ಲಿ 10 ಚೀಲ ಕೊಳೆತು ಹೋಗಿತ್ತು. ಉಳಿದ ಈರುಳ್ಳಿ ಮಾರಾಟ ಮಾಡಲು ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಹಾಗೆಯೇ ಶೇಖರಿಸಿದ್ದೆವು. ಉಪೇಂದ್ರ ಅವರು ಹಾಕಿದ್ದ ಪೋಸ್ಟ್ ನೋಡಿ ಕರೆ ಮಾಡಿದೇವು. ಆಗ ಅವರು ತಂದುಕೊಡಿ ಎಂಬುದಾಗಿ ರೈತ ಹೇಳಿದ್ದಾರೆ.