ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ ಪೈರೆಸಿ; ವಿರೋಧ ಭಾವ ಹಂಚಿಕೊಂಡ ನಾಯಕ

ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ ಪೈರೆಸಿ; ವಿರೋಧ ಭಾವ ಹಂಚಿಕೊಂಡ ನಾಯಕ

MS   ¦    Mar 07, 2021 04:59:14 PM (IST)
ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ ಪೈರೆಸಿ; ವಿರೋಧ ಭಾವ ಹಂಚಿಕೊಂಡ ನಾಯಕ

ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ ಬಿಡುಗಡೆಯಾಗಿ ಇದೀಗ ಮೂರು ದಿನಗಳಾಗಿದ್ದು, ಚಿತ್ರದ ಪೈರಸಿ ಆಗಿದೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರದ ನಾಯಕ ರಿಷಬ್ ಶೆಟ್ಟಿ ಮಾತನಾಡಿದ್ದು, ಈ ರೀತಿಯಾಗಿ ಚಿತ್ರಗಳನ್ನು ಐಸೈಸಿ ಮಾಡುವವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾತನಾಡಿ ಬಂದು ವಿಡಿಯೋವನ್ನು ಹರಿ ಬಿಟ್ಟಿದ್ದು, "ಹೀರೋ ಚಿತ್ರ ಚಿತ್ರಮಂದಿರಗಳಲ್ಲಿ ಅಂತೆಯೇ ಪೈರಸಿಯನ್ನು ಚೆನ್ನಾಗಿ ಓಡುತ್ತಿದೆ. ಕೊರೋನ ಸಮಯದಿಂದಾಗಿ ಈಗಾಗಲೇ ಅನೇಕ ಚಿತ್ರತಂಡಗಳು ಹಾಗೂ ಇದನ್ನೇ ನಂಬಿ ಬದುಕುತ್ತಿರುವವರು ತೊಂದರೆಗೆ ಸಿಕ್ಕಿ ಕೊಂಡಿದ್ದಾರೆ. ಬಹಳ ಕಾಲದ ನಂತರ ಚಿತ್ರಮಂದಿರಗಳು ಪುನರ್ ಆರಂಭವಾಗಿದ್ದು, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಿ ನೋಡುವ ಬದಲು ಅರಸುಗಳ ಮೂಲಕ ನೋಡಿದರೆ ಅದರಿಂದ ಮತ್ತೆ ತೊಂದರೆಗಳಾಗುತ್ತವೆ" ಎಂದಿದ್ದಾರೆ.

ಅಷ್ಟೇ ಅಲ್ಲದೆ, ಈ ರೀತಿಯ ಪಾಲಿಸಿಗಳನ್ನು ಮಾಡುವ ವೆಬ್ಸೈಟ್ಸ್ ಹಾಗೂ ಆಪ್ ಗಳ ವಿರುದ್ಧ ಇದುವರೆಗೂ ಸರ್ಕಾರ ಯಾಕೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದರೊಂದಿಗೆ ರಿಷಬ್ ಶೆಟ್ಟಿ ಜನರಲ್ಲಿ ಈ ರೀತಿಯ ಬಳಸಿ ಲಿಂಕ್ಗಳು ದೊರಕಿದ್ದಾರೆ ಅದನ್ನು ಚಿತ್ರತಂಡಕ್ಕೆ ಕಳುಹಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.