ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರ ಬಿಡುಗಡೆಗೆ ಹಸಿರುನಿಶಾನೆ ನೀಡಿದ ಹೈಕೋರ್ಟ್

ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರ ಬಿಡುಗಡೆಗೆ ಹಸಿರುನಿಶಾನೆ ನೀಡಿದ ಹೈಕೋರ್ಟ್

Ms   ¦    Jun 10, 2021 03:46:14 PM (IST)
ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರ ಬಿಡುಗಡೆಗೆ ಹಸಿರುನಿಶಾನೆ ನೀಡಿದ ಹೈಕೋರ್ಟ್

ನವದೆಹಲಿ : ಕಳೆದ ವರ್ಷ ಜೂನ್ 14ರಂದು ನಿಗೂಢವಾಗಿ ಸಾವನ್ನಪ್ಪಿದ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಅನೇಕ ಗೊಂದಲ ಹಾಗೂ ಚರ್ಚೆಗಳು ದೇಶಾದ್ಯಂತ ಉಂಟಾಗಿದ್ದವು. ಅಷ್ಟೇ ಅಲ್ಲದೆ ದೇಶದಲ್ಲಿ ಹಬ್ಬಿರುವ ಡ್ರಗ್ಸ್ ಜಾಲದ ಕುರಿತು ಹೊರಬಂದಿತ್ತು. ಇಷ್ಟಾಗಿಯೂ ಅವರ ಸಾವಿನ ಕುರಿತಾದ ತನಿಖೆ ಇನ್ನೂ ಮುಂದುವರೆದಿದೆ. ಇಂತಹ ಸಂದರ್ಭದಲ್ಲಿ ಇದೀಗ ಮತ್ತೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ನಿಗೂಢವಾಗಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನ ಆಧಾರಿತ ಚಲನಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂಬ ಮನವಿಯನ್ನು ದೆಹಲಿ ಹೈಕೋರ್ಟ್ ತಳ್ಳಿಹಾಕಿದೆ . ನ್ಯಾಯ್ , ದಿ ಜಸ್ಟಿಸ್ ಎಂಬ ಚಿತ್ರ ಬಿಡುಗಡೆಗೆ ದೆಹಲಿ ಹೈಕೋರ್ಟ್ ಹಸಿರು ನಿಶಾನೆ ನೀಡಿದೆ .

 ಚಿತ್ರ ಬಿಡುಗಡೆ ವಿರೋಧಿಸಿ ಸುಶಾಂತ್ ಸಿಂಗ್ ರಜಪೂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು . ಆದರೆ ಈಗ ಅರ್ಜಿ ವಜಾ ಆಗಿದ್ದು, ಚಿತ್ರ ಬಿಡುಗಡೆಯಾಗಲಿದೆ.