ಕೆಜಿಎಫ್ ಚಾಪ್ಟರ್ 2 ತೆಲುಗಿನ ಹಕ್ಕಿಗೆ 65 ಕೋಟಿ

ಕೆಜಿಎಫ್ ಚಾಪ್ಟರ್ 2 ತೆಲುಗಿನ ಹಕ್ಕಿಗೆ 65 ಕೋಟಿ

HSA   ¦    Feb 22, 2021 10:04:16 AM (IST)
ಕೆಜಿಎಫ್ ಚಾಪ್ಟರ್ 2 ತೆಲುಗಿನ ಹಕ್ಕಿಗೆ 65 ಕೋಟಿ

ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ತೆಲುಗಿನ ಹಕ್ಕನ್ನು ತೆಲುಗಿನ ಪ್ರಸಿದ್ಧ ನಿರ್ಮಾಪಕ ದಿಲ್ ರಾಜು ಅವರು ಪಡೆದುಕೊಂಡಿದ್ದಾರೆ ಎಂದು ಹೊಂಬಾಳೆ ಫಿಲ್ಮ್ ಹೌಸ್ ಹೇಳಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹಕ್ಕಿಗಾಗಿ ದಿಲ್ ರಾಜು ಅವರು 65 ಕೋಟಿ ರೂಪಾಯಿ ನೀಡಿರುವರು ಎಂದು ಮೂಲಗಳು ಹೇಳಿವೆ.

70 ಕೋಟಿ ರೂಪಾಯಿ ಬೇಡಿಕೆಯನ್ನು ಇಡಲಾಗಿತ್ತು. ಆದರೆ ಅಂತಿಮವಾಗಿ ನಿರ್ಮಾಪಕರು 65 ಕೋಟಿ ರೂಪಾಯಿ ನೀಡಲು ಒಪ್ಪಿಕೊಂಡರು ಎಂದು ಮೂಲಗಳಿಂದ ತಿಳಿದುಬಂದಿದೆ.

ಕೆಜಿಎಫ್ ಚಾಪ್ಟರ್ 2 ನಲ್ಲಿ ಯಶ್, ಸಂಜಯ್ ದತ್, ರವೀನ ಟಂಡನ್, ಪ್ರಕಾಶ್ ರಾಜ್ ಮತ್ತು ಇತರ ಹಲವಾರು ಮಂದಿ ನಟಿಸಿರುವರು.