ಆತ್ಮಹತ್ಯೆಗೆ ಯತ್ನ: ನಟಿ ವಿಜಯಲಕ್ಷ್ಮೀ ಆಸ್ಪತ್ರೆಗೆ ದಾಖಲು

ಆತ್ಮಹತ್ಯೆಗೆ ಯತ್ನ: ನಟಿ ವಿಜಯಲಕ್ಷ್ಮೀ ಆಸ್ಪತ್ರೆಗೆ ದಾಖಲು

YK   ¦    Jul 27, 2020 12:00:48 PM (IST)
ಆತ್ಮಹತ್ಯೆಗೆ ಯತ್ನ: ನಟಿ ವಿಜಯಲಕ್ಷ್ಮೀ ಆಸ್ಪತ್ರೆಗೆ ದಾಖಲು

ತಮಿಳುನಾಡು: ಆತ್ಮಹತ್ಯಗೆ ಯತ್ನಿಸಿರುವ ನಟಿ ವಿಜಯಲಕ್ಷ್ಮೀ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ನಟಿ ವಿಜಯಲಕ್ಷ್ಮೀ ಅವರು ವಿಡಿಯೋ ಒಂದನ್ನು ರಿಲೀಸ್ ಮಾಡಿ ಇದು ನನ್ನ ಕೊನೆಯ ವಿಡಿಯೋ ಎಂದು ಹೇಳಿಕೊಂಡಿದ್ದರು.

ಕಳೆದ ನಾಲ್ಕು ತಿಂಗಳಿನಿಂಧ ನಾನು ಸೀಮಾನ್ ಎಂಬಾತನಿಂಧ ಮಾನಸಿಕ ಖನ್ನತೆಗೆ ಒಳಗಾಗಿದ್ದೇನೆ. ಹರಿ ನಂದರ ಎಂಬಾತ ನನ್ನ ಮರ್ಯಾದೆಯನ್ನು ಕಳೆದಿದ್ದಾನೆ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ಟಾರ್ಚರ್ ಕೊಟ್ಟಿದ್ದಾರೆ. ನನ್ನ ಅಭಿಮಾನಿಗಳು ಇವರನ್ನು ಸುಮ್ಮನೇ ಬಿಡಬೇಡಿ ಎಂದು ಹೇಳಿಕೊಂಡಿದ್ದಾರೆ. ಇದೀಗ ವಿಜಯಲಕ್ಷ್ಮೀ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.•