ಕ್ಯಾನ್ಸರ್ ಪೀಡಿತ ಬಾಲಕನ ಇಚ್ಛೆ ಪೂರೈಸಿದ ರಜನಿಕಾಂತ್

ಕ್ಯಾನ್ಸರ್ ಪೀಡಿತ ಬಾಲಕನ ಇಚ್ಛೆ ಪೂರೈಸಿದ ರಜನಿಕಾಂತ್

HSA   ¦    May 23, 2020 04:28:07 PM (IST)
ಕ್ಯಾನ್ಸರ್ ಪೀಡಿತ ಬಾಲಕನ ಇಚ್ಛೆ ಪೂರೈಸಿದ ರಜನಿಕಾಂತ್

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರು ಯಾವಾಗಲೂ ತನ್ನ ಮಾನವೀಯ ಕಾರ್ಯಗಳಿಂದ ಜನಪ್ರಿಯರಾದವರು. ಈಗ ಬೆಂಗಳೂರಿನ ಕ್ಯಾನ್ಸರ್ ಪೀಡಿತ ಬಾಲಕನೊಬ್ಬನಿಗೆ ಅವರು ಕರೆ ಮಾಡಿ ಧೈರ್ಯ ಹೇಳಿರುವರು.

ಬಾಲಕನಿಗೆ ಧೈರ್ಯ ಹೇಳಿದ ರಜನಿ ಅವರು, ಹುಷಾರಾದ ಬಳಿಕ ಚೆನ್ನೈಗೆ ಬಾ, ನಾವಿಬ್ಬರು ಭೇಟಿ ಮಾಡೋಣ ಎಂದಿದ್ದಾರೆ.

ಕ್ಯಾನ್ಸರ್ ಪೀಡಿತ ಕೆವಿನ್ ಎನ್ನುವ ಬಾಲಕನಿಗೆ ರಜನಿಕಾಂತ್ ಅವರ ಜತೆ ಮಾತನಾಡುವ ಇಚ್ಛೆಯಿತ್ತು. ಇದಕ್ಕೆ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಸಂಬಂಧಿಕರ ಮೂಲಕ ಬಾಲಕನ ಇಚ್ಛೆ ಬಗ್ಗೆ ತಿಳಿಯಿತು. ಹೀಗಾಗಿ ಬಾಲಕನ ಆಸೆ ಈಡೇರಿಸಬೇಕೆಂದು ರಜನಿಕಾಂತ್ ಅವರಲ್ಲಿ ಕೇಳಿಕೊಂಡೆ. ಅವರು ಇದಕ್ಕೆ ಸ್ಪಂದಿಸಿದರು ಎಂದು ಸಿಂಧ್ಯಾ ತಿಳಿಸಿದರು.