ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ-ನಿವೇದಿತಾ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ-ನಿವೇದಿತಾ

HSA   ¦    Feb 26, 2020 10:24:21 AM (IST)
ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ-ನಿವೇದಿತಾ

ಮೈಸೂರು: ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ರೂಪದರ್ಶಿ ನಿವೇದಿತಾ ಗೌಡ ಅವರು ವಿವಾಹ ಬಂಧನಕ್ಕೊಳಗಾದರು.

ಮದುವೆ ಕಾರ್ಯಕ್ರಮವು ಬಂಟ ಹಾಗೂ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು. ಚಂದನ್ ಶೆಟ್ಟಿ ಅವರ ತಂದೆ ಪರಮೇಶ್ ಮತ್ತು ತಾಯಿ ಪ್ರೇಮಲತಾ, ನಿವೇದಿತಾ ಅವರ ತಂದೆ ರಮೇಶ್ ಮತ್ತು ತಾಯಿ ಹೇಮಾ ಅವರು ಮಗಳನ್ನು ಧಾರೆ ಎರೆದುಕೊಟ್ಟರು.

ನಟ ಪುನೀತ್ ರಾಜ್ ಕುಮಾರ್, ಧ್ರುವ್ ಸರ್ಜಾ, ಅಕುಲ್ ಬಾಲಾಜಿ ಮತ್ತು ಸ್ಯಾಂಡಲ್ ವುಡ್ ನ ಇತರ ಹಲವಾರು ಮಂದಿ ಗಣ್ಯರು ಮದುವೆಯಲ್ಲಿ ಭಾಗಿಯಾದರು.

ಕನ್ನಡ ಬಿಗ್ ಬಾಸ್ 5ರಲ್ಲಿ ಸ್ಪರ್ಧಿಗಳಾಗಿದ್ದ ನಿವೇದಿತಾ ಮತ್ತು ಚಂದನ್ ಶೆಟ್ಟಿಗೆ ಅಲ್ಲೇ ಪ್ರೇಮಾಂಕುರವಾಗಿತ್ತು. ಮೈಸೂರು ದಸರಾ ಸಂದರ್ಭದಲ್ಲಿ ಚಂದನ್ ಶೆಟ್ಟ ಕಾರ್ಯಕ್ರಮದ ವೇಳೆ ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಇದು ತುಂಬಾ ವಿವಾದಕ್ಕೆ ಕಾರಣವಾಗಿತ್ತು.