ಟಿವಿ ಶೋ ತೀರ್ಪುಗಾರ ಗಾಯಕಿಗೆ ಚುಂಬಿಸಿದ ಸ್ಪರ್ಧಾಳು!

ಟಿವಿ ಶೋ ತೀರ್ಪುಗಾರ ಗಾಯಕಿಗೆ ಚುಂಬಿಸಿದ ಸ್ಪರ್ಧಾಳು!

HSA   ¦    Oct 19, 2019 04:23:46 PM (IST)
ಟಿವಿ ಶೋ ತೀರ್ಪುಗಾರ ಗಾಯಕಿಗೆ ಚುಂಬಿಸಿದ ಸ್ಪರ್ಧಾಳು!

ನವದೆಹಲಿ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಗೆ ಇಂಡಿಯನ್ ಐಡಿಯಲ್ 11ನ ಸರ್ಧಿಯೊಬ್ಬ ಚುಂಬಿಸಿದ ಘಟನೆಯು ನಡೆದಿದ್ದು, ಇತರ ಸ್ಪರ್ಧಾಳುಗಳು ಮತ್ತು ತೀರ್ಪುಗಾರರು ಇದರಿಂದ ಒಂದು ಕ್ಷಣ ದಂಗಾಗಿದ್ದಾರೆ.

ನೇಹಾ ಅವರೊಂದಿಗೆ ಸಂಗೀತ ನಿರ್ದೇಶಕ ಅನು ಮಲಿಕ್ ಮತ್ತು ಗಾಯಕ ವಿಶಾಲ್ ದದ್ಲಾನಿ ಅವರು ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಸ್ಪರ್ಧಾಳುವನ್ನು ಅಭಿನಂದಿಸಲು ಹೋಗಿದ್ದ ನೇಹಾ ಅವರಿಗೆ ಸ್ಪರ್ಧಿಯು ಚುಂಬಿಸಿ ಅಚ್ಚರಿಗೀಡು ಮಾಡಿದ್ದಾನೆ.

ಈ ಘಟನೆಯ ವಿಡಿಯೋವನ್ನು ಚಾನೆಲ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈ ಸ್ಪರ್ಧಿಯು ನೇಹಾ ಅವರ ಅಪ್ಪಟ ಅಭಿಮಾನಿಯಾಗಿದ್ದು, ಆಕೆಗೆ ಗೊಂಬೆಗಳನ್ನು ಉಡುಗೊರೆಯಾಗಿ ತಂದಿದ್ದ. ಈ ವೇಳೆ ನೇಹಾ ಅವರು ಸ್ಪರ್ಧಿಯನ್ನು ಅಪ್ಪಿದ ವೇಳೆ ಆತ ಚುಂಬಿಸಿದ್ದಾನೆ.