ನನ್ನ ಅನ್ನದಾತರನ್ನು ಕೆಣಕದಿರಿ: ವಿರೋಧಿಗಳಿಗೆ ದರ್ಶನ್ ಎಚ್ಚರಿಕೆ

ನನ್ನ ಅನ್ನದಾತರನ್ನು ಕೆಣಕದಿರಿ: ವಿರೋಧಿಗಳಿಗೆ ದರ್ಶನ್ ಎಚ್ಚರಿಕೆ

YK   ¦    Sep 17, 2019 02:58:04 PM (IST)
ನನ್ನ ಅನ್ನದಾತರನ್ನು ಕೆಣಕದಿರಿ: ವಿರೋಧಿಗಳಿಗೆ ದರ್ಶನ್ ಎಚ್ಚರಿಕೆ

ಬೆಂಗಳೂರು: ಫೈಲ್ವಾನ್ ಚಿತ್ರ ಫೈರಾಸಿ ಸಂಬಂಧ ಸ್ಯಾಂಡಲ್ ವುಡ್ ನಲ್ಲಿ ಫ್ಯಾನ್ಸ್ ವಾರ್ ಜೋರಾಗಿಯೇ ನಡೆಯುತ್ತಿದ್ದು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಂಟ್ರಿ ಕೊಟ್ಟಿದ್ದಾರೆ.

ನಟ ಕಿಚ್ಚ ಸುದೀಪ್ ಅಭಿನಯನದ ಫೈಲ್ವಾನ್ ಚಿತ್ರ ಬಿಡುಗಡೆ ಕಂಡು ಕೆಲವೇ ದಿನಗಳಲ್ಲಿ ಫೈರಾಸಿ ಆಗಿತ್ತು.  ಆ ಆರೋಪವನ್ನು ಸುದೀಪ್ ಅಭಿಮಾನಿಗಳು ದರ್ಶನ್ ಅಭಿಮಾನಿಗಳ ಮೇಲೆ ಹೊರಿಸಿ, ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರನ್ನು ಅವಾಚ್ಯ ಶಬ್ಧಗಳಿಂದ ಬೈದಿದ್ದರು.

ಸೆ.16ರಂದು ದರ್ಶನ್ ಅಭಿಮಾನಿಗಳು ಬಾಸ್ ವಿರೋಧಿಗಳಿಗೆ ಮತ್ತು ಅವರ ಫ್ಯಾನ್ಸ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನಟ ಮತ್ತು ಅವರ ಅಭಿಮಾನಿಗಳಗೆ ಬಹಿರಂಗ ಪತ್ರ ಬರೆದಿದ್ದರು. ಆ ನಂತರ ದರ್ಶನ್- ಸುದೀಪ್ ಫ್ಯಾನ್ಸ್ ವಾರ್ ಜೋರಾಗಿಯೇ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಈ ಸಂಬಂಧ ಟ್ವೀಟ್ ಮಾಡಿದ ನಟ ದರ್ಶನ್,‘ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು- ನನ್ನ ಅನ್ನದಾತರು ಸೆಲೆಬ್ರಿಟಿಗಳನ್ನು ಕೆಣಕಲು, ಪ್ರಚೋದಿಸಲು ಬರದಿರಿ’ ಎಂದು ಬರೆದಿದ್ದಾರೆ.