ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ

HSA   ¦    Apr 29, 2020 01:25:12 AM (IST)
ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ

ಮುಂಬಯಿ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಏ.29(ಬುಧವಾರ) ನಿಧನರಾದರು.

53ರ ಹರೆಯದ ಇರ್ಫಾನ್ ಖಾನ್ ಅವರು ಅಪರೂಪದ ಕ್ಯಾನ್ಸರ್ ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಮಂಗಳವಾರ ಅವರನ್ನು ಮುಂಬಯಿ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರು ಇಂದು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.

ಶನಿವಾರ ಇರ್ಫಾನ್ ತಾಯಿ ರಾಜಸ್ಥಾನದಲ್ಲಿ ನಿಧನರಾಗಿದ್ದರು. ಅವರಿಗೆ ಲಾಕ್ ಡೌನ್ ನಿಂದಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ತಾಯಿಯ ಶೋಕದಲ್ಲಿದ್ದ ಅವರು ಮಂಗಳವಾರ ತೀವ್ರವಾಗಿ ಅನಾರೋಗ್ಯಕ್ಕೀಡಾಗಿದ್ದರು.

2018ರಲ್ಲಿ ಇರ್ಫಾನ್ ಅವರಿಗೆ ನ್ಯೂರೊಎಂಡೊಕ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ಇದರ ಬಳಿಕ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡು ಮರಳಿದ್ದರು.

ಸ್ಲಮ್ ಡಾಗ್ ಮಿಲಿಯನೇರ್, ದಿ ಲೈಫ್ ಆಫ್ ಪೈ, ದಿ ಮೈಟಿ ಹಾರ್ಡ್ ಹಾಗೂ ಜುರಾಸಿಕ್ ವರ್ಲ್ಡ್ ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ ವಿಶ್ವಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತ್ತು.