ನಟಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಪ್ರಶಸ್ತಿ

ನಟಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಪ್ರಶಸ್ತಿ

YK   ¦    Mar 10, 2020 10:46:28 AM (IST)
ನಟಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಪ್ರಶಸ್ತಿ

ನಾಲ್ಕನೇ ವಿಶ್ವ ಸಿನಿಮೋತ್ಸವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಪುರಸ್ಕಾರಕ್ಕೆ ನಟಿ ಹರಿಪ್ರಿಯಾ ಪಾತ್ರರಾಗಿದ್ದಾರೆ. ನೊಯ್ಡಾದಲ್ಲಿ ನಡೆದ ನಾಲ್ಕನೇ ಭಾರತೀಯ ಸಿನಿಮೋತ್ದವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿಯನ್ನು ನೀಡಲಾಗಿದೆ.

ಅಮೃತಮತಿ ಸಿನಿಮಾದಲ್ಲಿನ ಅಭಿನಯಕ್ಕಾಗಿ ಹರಿಪ್ರಿಯಾ ಅವರಿಗೆ ಪ್ರಶಸ್ತಿ ಲಭಿಸಿದೆ.

ವಿಶ್ವ ಸಿನಿಮೋತ್ಸವ ಸ್ಪರ್ಧಾ ವಿಭಾಗಕ್ಕೆ ಅಮೃತಮತಿ ಸಿನಿಮಾ ಆಯ್ಕೆಯಾಗಿತ್ತು. ಟರ್ಕಿಯ ಸಿನಿಮಾದಲ್ಲಿನ ಅಭಿನಯಕ್ಕಾಗಿ ಆ ಸಿನಿಮಾದ ನಾಯಕ ನಟ ಶ್ರೇಷ್ಠನಟ ಪ್ರಶಸ್ತಿಗೆ ಆಯ್ಕೆಯಾದರೆ, ಕನ್ನಡದ ಅಮೃತಮತಿ ಸಿನಿಮಾದಲ್ಲಿನ ಅಭಿನಯಕ್ಕಾಗಿ ಹರಿಪ್ರಿಯಾ ಅವರು ಶ್ರೇಷ್ಠ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.