ಡ್ರಗ್ಸ್ ಪತ್ತೆ ಪ್ರಕರಣ: ಹಾಸ್ಯನಟಿ ಭಾರತಿ ಸಿಂಗ್, ಪತಿ ಹರ್ಷಗೆ ಜಾಮೀನು

ಡ್ರಗ್ಸ್ ಪತ್ತೆ ಪ್ರಕರಣ: ಹಾಸ್ಯನಟಿ ಭಾರತಿ ಸಿಂಗ್, ಪತಿ ಹರ್ಷಗೆ ಜಾಮೀನು

YK   ¦    Nov 24, 2020 09:00:38 AM (IST)
ಡ್ರಗ್ಸ್ ಪತ್ತೆ ಪ್ರಕರಣ: ಹಾಸ್ಯನಟಿ ಭಾರತಿ ಸಿಂಗ್, ಪತಿ ಹರ್ಷಗೆ ಜಾಮೀನು

ಮುಂಬೈ: ಶನಿವಾರ ಡ್ರಗ್ಸ್ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಹಾಸ್ಯನಟಿ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಅವರಿಗೆ ಮುಂಬೈ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದ ಇವರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ತಲಾ 15 ಸಾವಿರ ರೂಪಾಯಿ ಬಾಂಡ್ ಮೇಲೆ ಜಾಮೀನು ನೀಡಿದೆ.

ಎನ್‌ಸಿಬಿ ಅಧಿಕಾರಿಗಳು ನಟಿ ಭಾರತಿ ಹಾಗೂ ಅವರ ಪತಿ ಮಾದಕ ಪದಾರ್ಥ ಸೇವಿಸುತ್ತಾರೆ ಎಂಬ ನಿಖರ ಮಾಹಿತಿ ಮೇಲೆ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಡ್ರಗ್ಸ್ ಪತ್ತೆಯಾದ ಹಿನ್ನೆಲೆಯಲ್ಲಿ ದಂಪತಿಯನ್ನು ಬಂಧಿಸಲಾಗಿತ್ತು.