ಸುಶಾಂತ್ ಸಿಂಗ್ ಸಾವಿನ ಪ್ರಕರಣ; ಇಬ್ಬರು ಮಾದಕದ್ರವ್ಯ ಪೂರೈಕೆದಾರರ ಬಂಧನ

ಸುಶಾಂತ್ ಸಿಂಗ್ ಸಾವಿನ ಪ್ರಕರಣ; ಇಬ್ಬರು ಮಾದಕದ್ರವ್ಯ ಪೂರೈಕೆದಾರರ ಬಂಧನ

MS   ¦    Apr 13, 2021 02:56:50 PM (IST)
ಸುಶಾಂತ್ ಸಿಂಗ್ ಸಾವಿನ ಪ್ರಕರಣ; ಇಬ್ಬರು ಮಾದಕದ್ರವ್ಯ ಪೂರೈಕೆದಾರರ ಬಂಧನ

ಮುಂಬೈ : ಕಳೆದ ವರ್ಷ ಜೂನ್ 14ರಂದು ನಿಗೂಢವಾಗಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ತನಿಖೆ ಗಳಾಗಿದ್ದು, ಹಲವಾರು ವಿಷಯಗಳು ಬಹಿರಂಗವಾಗಿದ್ದವು.

ಇದೀಗ ಅದರ ಕುರಿತಂತೆ ವಿಚಾರಣೆ ಮುಂದುವರೆದಿದ್ದು, ಮಾದಕ ದ್ರವ್ಯ ಬಳಕೆ ಆಯಾಮದಲ್ಲಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಇಬ್ಬರನ್ನು ಬಂಧಿಸಿದೆ . ಬಂಧಿತ ಆರೋಪಿಗಳು ಮಾದಕ ದ್ರವ್ಯ ಪೂರೈಕೆ ಜಾಲದ ಸದಸ್ಯರಾಗಿದ್ದಾರೆ. ಮಲಾಡ್ , ಪರೇಲ್ ಮತ್ತು ಸಾಂತಾಕ್ರೂಜ್ ಪ್ರದೇಶಗಳಲ್ಲಿ ದಾಳಿ ನಡೆಸಿದ ಎನ್ ಸಿ ಬಿ , ಇಬ್ಬರು ಆರೋಪಿಗಳನ್ನು ಬಂಧಿಸಿದೆ . ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ .

ಇದೀಗ ಜಾರಿ ನಿರ್ದೇಶನಾಲಯದ ಸೂಚನೆಯಂತೆ ಎನ್ ಸಿ ಬಿ ಈ ಸಂಬಂಧ ತನಿಖೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.