ಆಸ್ಪತ್ರೆಯಿಂದ ಗಾಯಕಿ ಲತಾ ಮಂಗೇಶ್ಕರ್ ಡಿಸ್ಚಾರ್ಜ್

ಆಸ್ಪತ್ರೆಯಿಂದ ಗಾಯಕಿ ಲತಾ ಮಂಗೇಶ್ಕರ್ ಡಿಸ್ಚಾರ್ಜ್

YK   ¦    Dec 09, 2019 10:11:43 AM (IST)
ಆಸ್ಪತ್ರೆಯಿಂದ ಗಾಯಕಿ ಲತಾ ಮಂಗೇಶ್ಕರ್ ಡಿಸ್ಚಾರ್ಜ್

ಮಹಾರಾಷ್ಟ್ರ: ಉಸಿರಾಟದ ತೊಂದರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅವರ ಆರೋಗ್ಯ ಸುಧಾರಣೆಯಾಗಿದ್ದು, ಭಾನುವಾರ ಮನೆಗೆ ವಾಪಾಸ್ಸಾಗಿದ್ದಾರೆ. ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ನವೆಂಬರ್ 11ರಂದು ದಾಖಲಿಸಲಾಗಿತ್ತು.

ವೈದ್ಯೆರ ಸಲಹೆ ಮೇರೆಗೆ ಇದೀಗ ಲತಾ ಮಂಗೇಶ್ಕರ್ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಮನೆಗೆ ಬಂದ ಬಳಿಕ ಟ್ವೀಟ್ ಮಾಡಿದ ಲತಾ ಮಂಗೇಶ್ಕರ್, ‘ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದೆ. ವೈದ್ಯರೆ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೆ. ಸಂಪೂರ್ಣ ಗುಣಮುಖವಾಗಿದ್ದು, ಭಾನುವಾರ ಮನೆಗೆ ಬಂದಿದ್ದೇನೆ. ನಾನು ಬೇಗ ಚೇತರಿಸಿಕೊಳ್ಳಲೆಂದು ದೇವರದಲ್ಲಿ ಪ್ರಾರ್ಥಿಸಿದ ಎಲ್ಲ ಅಭಿಮಾನಿಗಳಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.