ಬಾಲಿವುಡ್ ನ ಹಿರಿಯ ನಟಿ ವಿದ್ಯಾ ಸಿನ್ಹಾ ವಿಧಿವಶ

ಬಾಲಿವುಡ್ ನ ಹಿರಿಯ ನಟಿ ವಿದ್ಯಾ ಸಿನ್ಹಾ ವಿಧಿವಶ

HSA   ¦    Aug 15, 2019 03:55:56 PM (IST)
ಬಾಲಿವುಡ್ ನ ಹಿರಿಯ ನಟಿ ವಿದ್ಯಾ ಸಿನ್ಹಾ ವಿಧಿವಶ

ಮುಂಬಯಿ: ಬಾಲಿವುಡ್ ನ ಹಿರಿಯ ನಟಿ ವಿದ್ಯಾ ಸಿನ್ಹಾ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮಧ್ಯಾಹ್ನ ವೇಳೆ ನಿಧನರಾದರು.

ಶ್ವಾಸಕೋಶ ಮತ್ತು ಹೃದಯದ ಸಮಸ್ಯೆಯಿಂದ ಬಳುತ್ತಿದ್ದ ವಿದ್ಯಾ ಅವರನ್ನು ಉಸಿರಾಟದ ತೊಂದರೆಯಿಂದಾಗಿ ಆಗಸ್ಟ್ 10ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿಡಲಾಗಿತ್ತು. ಆದರೆ ಇಂದು ಮಧ್ಯಾಹ್ನ ಒಂದು ಗಂಟೆಗೆ ಅವರು ಕೊನೆಯುಸಿರೆಳೆದರು ಎಂದು ವರದಿಗಳು ಹೇಳಿವೆ.

ವಿದ್ಯಾ ಸಿನ್ಹಾ ಅವರು 2011ರಲ್ಲಿ ಬಿಡುಗಡೆಯಾಗಿದ್ದ ಬಾಡಿಗಾರ್ಡ್ ಸಿನಿಮಾದಲ್ಲಿ ಕೊನೆಯ ಸಲ ನಟಿಸಿದ್ದರು. ಇವರು ಏಕ್ತಾ ಕಪೂರ್ ಧಾರವಾಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.

ವಿದ್ಯಾ ಸಿನ್ಹಾ ಅವರು ಬಸು ಚಟರ್ಜಿ ಸಿನಿಮಾಗಳಾದ ರಜನಿಗಂಧ(1974), ಛೋಟಿ ಸಿ ಬಾತ್(1976) ಮತ್ತು ಬಿಆರ್ ಚೋಪ್ರಾ ಅವರ ಪಟಿ, ಪತ್ನಿ ಔರ್ ವೋ(1978) ಹೆಚ್ಚು ಜನಪ್ರಿಯವಾಗಿದ್ದವು.