ಕಂಗನಾ ಫ್ಯಾಬ್ರಿಕ್ ಸ್ಯಾರಿಗೆ ಭಾರೀ ಬೇಡಿಕೆ!

ಕಂಗನಾ ಫ್ಯಾಬ್ರಿಕ್ ಸ್ಯಾರಿಗೆ ಭಾರೀ ಬೇಡಿಕೆ!

KB   ¦    Sep 14, 2020 04:15:41 PM (IST)
ಕಂಗನಾ ಫ್ಯಾಬ್ರಿಕ್ ಸ್ಯಾರಿಗೆ ಭಾರೀ ಬೇಡಿಕೆ!

ವಡೋದರ: ಸದ್ಯಕ್ಕೆ ರಾಷ್ಟ್ರವ್ಯಾಪಿ ಚರ್ಚೆಯಲ್ಲಿರುವ ನಟಿ ಎಂದರೆ ಕಂಗನಾ ರಣಾವತ್. ಕೆಲವರು ಕಂಗನಾ ಬೆಂಬಲಕ್ಕೆ ಬಂದರೆ ಇನ್ನು ಕೆಲವರು ಆಕೆಯನ್ನು ವಿರೋಧಿಸುತ್ತಿದ್ದಾರೆ.

ಈ ಮಧ್ಯೆ ಗುಜರಾತಿನ ವ್ಯಾಪಾರಿಯೊಬ್ಬರು ಕಂಗನಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕಂಗನಾ ಅವರ ಸಾಹಸದಿಂದ ಸ್ಪೂರ್ತಿ ಪಡೆದಿರುವ ವ್ಯಾಪಾರಿ ರತನ್, ಕಂಗನಾ ಹೆಸರಿನಲ್ಲಿ ಸೀರೆ ಸಿದ್ದಪಡಿಸುತ್ತಿದ್ದಾರೆ.

ಕಂಗನಾ ಧೈರ್ಯಕ್ಕೆ ಮೆಚ್ಚಬೇಕು, ಅವರು ಪ್ರಶ್ನೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿರುವ ರತನ್ ಅವರ ಸಾಹಸ ಮೆಚ್ಚುವ ಸಲುವಾಗಿ ಸೀರೆಯನ್ನು ತಯಾರಿಸುತ್ತಿರುವುದಾಗಿ ಹೇಳಿದ್ದಾರೆ.

ಸೀರೆ ಮೇಲೆ ಕಂಗನಾ ಫೋಟೋ ಇದೆ. ಜತೆಗೆ ಕಂಗನಾ ಮಾಡುತ್ತಿರುವುದು ಸರಿಯಾಗಿದೆ ಎಂಬ ಸಮರ್ಥನೆಯ ವಾಕ್ಯವಿದೆ. ಈ ಸೀರೆಗೆ ಕಂಗನಾ ರಣಾವತ್ ಫ್ಯಾಬ್ರಿಕ್ ಸ್ಯಾರಿ ಎಂದು ಹೆಸರಿಡಲಾಗಿದೆ. ಈ ಸೀರೆಯ ಬೆಲೆ ಒಂದು ಸಾವಿರ ರೂಪಾಯಿಂದ ಪ್ರಾರಂಭವಾಗುತ್ತದೆ.

ಇದೀಗ ಮಾರುಕಟ್ಟಗೆ ಲಗ್ಗೆ ಇಟ್ಟಿರುವ ಈ ಸೀರೆಗೆ ಬಹಳ ಬೇಡಿಕೆ ಇದೆ ಎಂದು ರತನ್ ಹೇಳಿದ್ದಾರೆ.