ಗೋಶಾಲೆಗೆ ಮೇವು ನೀಡಿದ ದರ್ಶನ್

ಗೋಶಾಲೆಗೆ ಮೇವು ನೀಡಿದ ದರ್ಶನ್

LK   ¦    Jan 21, 2020 06:43:47 PM (IST)
ಗೋಶಾಲೆಗೆ ಮೇವು ನೀಡಿದ ದರ್ಶನ್

ಪಾಂಡವಪುರ: ಮಂಡ್ಯ ಭಾಗದ ಗೋ ಶಾಲೆಯ ಹಸುಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 15 ಲೋಡ್ ಮೇವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ಬರದಿಂದಾಗಿ ಈ  ಭಾಗದ ರೈತರ ಜಾನುವಾರುಗಳಿಗೆ ಮೇವಿಲ್ಲದೆ ಕಂಗೆಟ್ಟಿದ್ದಾರೆ. ಜತೆಗೆ  ಗೋಶಾಲೆಗಳಲ್ಲಿರುವ ಹಸುಗಳಿಗೂ ಮೇವಿನ ಸಮಸ್ಯೆ ತಲೆದೋರಿದೆ. ಈ ವಿಷಯ ದರ್ಶನ್‍ರಿಗೆ ಗೊತ್ತಾಗಿರುವ ಹಿನ್ನೆಲೆಯಲ್ಲಿ ಅವರು ದೊಡ್ಡಬ್ಯಾಡರ ಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು, ಅಲ್ಲಿನ  ಚೈತ್ರ ಗೋ ಶಾಲೆಗೆ 15 ಟ್ರ್ಯಾಕ್ಟರ್ ಗಳಷ್ಟು ಮೇವನ್ನು ನೀಡಿ ತಮ್ಮ ಪ್ರಾಣಿ ಪ್ರೀತಿಯನ್ನು ಮರೆದಿದ್ದಾರೆ. ಇನ್ನು ದರ್ಶನ್ ಭೇಟಿ ನೀಡಿರುವ ಫೋಟೋ ಮತ್ತು ಟ್ರ್ಯಾಕ್ಟರ್ ಗಳ ಮೂಲಕ ಸಾಗುತ್ತಿರುವ ಹುಲ್ಲಿನ ರಾಶಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವುದನ್ನು ಕಾಣಬಹುದಾಗಿದೆ.