ಜೂನಿಯರ್ ಎನ್ ಟಿಆರ್ ಗೆ ಸಿನಿಮಾ ನಿರ್ದೇಶಿಸಲಿರುವ ಪ್ರಶಾಂತ್ ನೀಲ್

ಜೂನಿಯರ್ ಎನ್ ಟಿಆರ್ ಗೆ ಸಿನಿಮಾ ನಿರ್ದೇಶಿಸಲಿರುವ ಪ್ರಶಾಂತ್ ನೀಲ್

HSA   ¦    May 13, 2020 10:28:54 AM (IST)
ಜೂನಿಯರ್ ಎನ್ ಟಿಆರ್ ಗೆ ಸಿನಿಮಾ ನಿರ್ದೇಶಿಸಲಿರುವ ಪ್ರಶಾಂತ್ ನೀಲ್

ಬೆಂಗಳೂರು: ಹಿಟ್ ಸಿನಿಮಾ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಟಾಲಿವುಡ್ ನಲ್ಲಿ ಜೂನಿಯರ್ ಎನ್ ಟಿಆರ್ ಗೆ ಮುಂದಿನ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ಇದು ಜೂನಿಯರ್ ಎನ್ ಟಿಆರ್ ಅವರ 31ನೇ ಸಿನಿಮಾವಾಗಿರಲಿದೆ. ಈ ಬಗ್ಗೆ ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್ ಟಿಆರ್ ಅವರ ಜನ್ಮದಿನವಾಗಿರುವ ಮೇ 20ರಂದು ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇದು 1.5 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವಂತಹ ಸಿನಿಮಾ. ಜೂನಿಯರ್ ಎನ್ ಟಿಆರ್ ಈಗಾಗಲೇ ಸ್ಕ್ರಿಪ್ಟ್ ಗೆ ಓಕೆ ಎಂದು ಹೇಳಿರುವರು. ನೀಲ್ ಮತ್ತು ತಂಡವು ಸಿನಿಮಾಗೆ ಅಂತಿಮ ಟಚ್ ನೀಡಲಿರುವರು.