ಚಂಡಮಾರುತ ಪೀಡಿತರಿಗೆ ಒಂದು ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್

ಚಂಡಮಾರುತ ಪೀಡಿತರಿಗೆ ಒಂದು ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್

HSA   ¦    May 07, 2019 04:01:14 PM (IST)
ಚಂಡಮಾರುತ ಪೀಡಿತರಿಗೆ ಒಂದು ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಚಂಡಮಾರುತ ಪೀಡಿತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಚಂಡಮಾರುತ ಪೀಡಿತರಿಗೆ ದೇಣಿಗೆ ನೀಡಿದವರಲ್ಲಿ ಅಕ್ಷಯ್ ಕುಮಾರ್ ಮೊದಲಿಗರು.

ಇದು ಮೊದಲೇನಲ್ಲ. ಅಕ್ಷಯ್ ಕುಮಾರ್ ಅವರು ಭಾರತ್ ಕೆ ವೀರ್ ಮೂಲಕ ಸೇನೆಗೆ ನೆರವು ನೀಡಿದ್ದರು. ಕೇರಳ ಮತ್ತು ಚೆನ್ನೈಯಲ್ಲಿ ನಡೆದ ಪ್ರವಾಹ ಸಂತ್ರಸ್ತರಿಗು ದೇಣಿಗೆ ನೀಡಿದ್ದರು.

ಅಕ್ಷಯ್ ಕುಮಾರ್ ಅವರು ಕರೀನಾ ಕಪೂರ್ ಜತೆಗೆ ಗುಡ್ ನ್ಯೂಸ್ ಸಿನಿಮಾದಲ್ಲಿ ನಟಿಸಲಿರುವರು.