ಗಾಯಕ ಹನುಮಂತನ ಹಾಡಿಗೆ ಕುಣಿದು ಕುಪ್ಪಳಿಸಿದ ಸಚಿವರು, ಸಂಸದರು

ಗಾಯಕ ಹನುಮಂತನ ಹಾಡಿಗೆ ಕುಣಿದು ಕುಪ್ಪಳಿಸಿದ ಸಚಿವರು, ಸಂಸದರು

YK   ¦    Feb 11, 2020 10:23:28 AM (IST)
ಗಾಯಕ ಹನುಮಂತನ ಹಾಡಿಗೆ ಕುಣಿದು ಕುಪ್ಪಳಿಸಿದ ಸಚಿವರು, ಸಂಸದರು

ಬೀದರ್: ತಮ್ಮ ಸುಮಧುರ ಕಂಠದಿಂದ ಮನೆಮಾತಾದ ಕುರಿಗಾಹಿ ಹಣಮಂತನ ಹಾಡಿಗೆ ಜನರು ಸಿಳ್ಳೆ ಹೊಡೆದರು. ಸಚಿವರಾದ ಪ್ರಭು ಚವ್ಹಾಣ್ ಹಾಗೂ ಸಂಸದರಾದ ಭಗವಂತ ಖೂಬಾ ಅವರು ಹಣಮಂತನೊಂದಿಗೆ ಹೆಜ್ಜೆ ಹಾಕಿ ಸಾರ್ವಜನಿಕರ ಉತ್ಸಾಹವನ್ನು ಇಮ್ಮಡಿಗೊಳಿಸಿದರು. 

ಹೌದು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಬೀದರ್‍ನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.9ರಂದು ರಾಜ್ಯಮಟ್ಟದ ಪಶುಮೇಳದ ಸಮಾರೋಪ ಸಮಾರಂಭ ವಿಭಿನ್ನವಾಗಿ ನಡೆಯಿತು. 

ಕುರಿ ಕಾಯುವ ಕಾಯಕದ ಮತ್ತು ಗಾಯನದಲ್ಲಿ ಉತ್ತಮ ಸಾಧನೆ ತೋರುತ್ತಿರುವ ಹಣಮಂತನನ್ನು ಕಾರ್ಯಕ್ರಮದ ಅತಿಥಿಯನ್ನಾಗಿ ಮಾಡಿದ್ದು, ಪಶುಮೇಳದ ಅತ್ಯಂತ ವಿಶೇಷತೆಯಲ್ಲೊಂದಾಗಿತ್ತು. ಸಚಿವರು, ಸಂಸದರು, ಹಿರಿಯ ಅಧಿಕಾರಿಗಳು ಮತ್ತು ವಿವಿಧ ಗಣ್ಯರು ಪಾಲ್ಗೊಂಡಿದ್ದ ಸಮಾರೋಪ ಸಮಾರಂಭದಲ್ಲಿ ಗಾಯಕ ಹಣಮಂತ ಹಲವಾರು ಹಾಡುಗಳನ್ನು ಹಾಡಿ ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ರಂಜಿಸಿದರು.

ಸಚಿವರಿಂದ ಬಹುಮಾನ: ಹಣಮಂತನ ಹಾಡಿಗೆ ಹೆಜ್ಜೆ ಹಾಕಿದ ಸಚಿವರಾದ ಪ್ರಭು ಚವ್ಹಾಣ್ ಅವರು ಬಳಿಕ ವೇದಿಕೆಯಲ್ಲಿಯೇ ಹಣಮಂತನಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು.