ಹಿಂದಿ ಕಿರುಚಿತ್ರ ನಿರ್ಮಿಸಿದ ಮಂಗಳೂರಿನ ಉದಯೋನ್ಮುಖ ಯುವ ನಿರ್ದೇಶಕಿ

ಹಿಂದಿ ಕಿರುಚಿತ್ರ ನಿರ್ಮಿಸಿದ ಮಂಗಳೂರಿನ ಉದಯೋನ್ಮುಖ ಯುವ ನಿರ್ದೇಶಕಿ

HSA   ¦    Jul 01, 2020 08:10:03 AM (IST)
ಹಿಂದಿ ಕಿರುಚಿತ್ರ ನಿರ್ಮಿಸಿದ ಮಂಗಳೂರಿನ ಉದಯೋನ್ಮುಖ ಯುವ ನಿರ್ದೇಶಕಿ

ಚಿತ್ರರಂಗ ಎನ್ನುವ ಬಣ್ಣದ ಲೋಕದಲ್ಲಿ ಅನೇಕ ಯುವಕ ಯವತಿಯರು ಹೆಚ್ಚಾಗಿ ತಮ್ಮನ್ನು ತಾವು ಸಿನೆಮಾಗಳಲ್ಲಿ ನಟ ನಟಿಯರಾಗಿ ತೊಡಗಿಸಿಕೊಳ್ತಾರೆ. ಆದರೆ ನಿರ್ದೇಶಕರಾಗಿ ಕಾಣಿಸಿಕೊಳ್ಳೋದು ಕಡಿಮೆ. ಆದರೆ ಮಂಗಳೂರಿನಲ್ಲಿ ಒಬ್ಬಳು ಯುವ ನಿರ್ದೇಶಕಿಯಿದ್ದಾಳೆ. ಈಗಾಗಲೇ ’ದ ಸಟಲ್ ಟ್ರುತ್’ ಎನ್ನುವ ಹಿಂದಿ ಕಿರುಚಿತ್ರ ನಿರ್ದೇಶನ ಮಾಡಿದ್ದು. ಒಟಿಟಿ ಪ್ಲ್ಯಾಟ್ಫಾರ್ಮ್ ಗಳಲ್ಲಿ ಬಿತ್ತರಿಸಲಾಗುವುದು.

ಚಿತ್ರರಂಗದಲ್ಲಿ ಯುವಕ ಯುವತಿಯರು ಹೆಚ್ಚಾಗಿ ತೆರೆಯ ಮುಂಭಾಗ ಕಾಣಿಸಿಕೊಳ್ಳಲು ಬಯಸುತ್ತಾರೆ. ಆದರೆ ಯುವತಿಯರು ನಟನೆ ಮಾತ್ರವಲ್ಲ, ನಿರ್ದೇಶನ ಕೂಡ ಮಾಡಬಹುದು ಎನ್ನುವುದನ್ನು ’ದ ಸಟಲ್ ಟ್ರುತ್’ ಎನ್ನುವ ಹಿಂದಿ ಕಿರುಚಿತ್ರವನ್ನು ನಿರ್ದೇಶನ ಮಾಡುವ ಮೂಲಕ 17 ವರ್ಷದ ಮಂಗಳೂರಿನ ಕ್ಷಿತಿ ಸುವರ್ಣ ತೋರಿಸಿಕೊಟ್ಟಿದ್ದಾರೆ.

ಇನ್ನೂ ’ದ ಸಟಲ್ ಟ್ರುತ್’ ಎನ್ನುವ ಹಿಂದಿ ಕಿರುಚಿತ್ರದ ಕಥೆ-ಚಿತ್ರಕಥೆ ಮತ್ತು ನಿರ್ದೇಶನ ಕ್ಷಿತಿ ಸುವರ್ಣ ಮಾಡಿದ್ದು, ಕನ್ನಡ ಚಲನಚಿತ್ರ ನಟಿ ಸೋನಲ್ ಮೊಂಥೆರೋ ಕ್ರಿಯೇಟಿವ್ ಡೈರೆಕ್ಟರ್ ಆಗಿ ಮತ್ತು ರಾಮ್ ತೇಜಾ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಲೀಟಾ ಮೊಂಥೆರೋ, ಶೇರಲ್ ಮೊಂಥೆರೋ, ಡಾ.ಪೃಥ್ವಿ ರಾವ್ ಮತ್ತು ರಕ್ಷತಾ ನಟಿಸಿದ್ದು ಮಂಜುನಾಥ್‌ರವರ ಅದ್ಬುತ ಕ್ಯಾಮರಾ ಕೈಚಳಕ ಮೂಡಿ ಬಂದಿದೆ.

ಇನ್ನೂ ಈ ಕಿರುಚಿತ್ರದಲ್ಲಿ ಪ್ರಸ್ತುತ ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದ್ದು,ವೀಕ್ಷಕರ ಟೇಸ್ಟ್‌ಗೆ ತಕ್ಕಂತೆ ಅನೇಕ ಕುತೂಹಲಕಾರಿ ದೃಶ್ಯಗಳನ್ನು ಚಿತ್ರಿಸಲಾಗಿದೆ.

’ದ ಸಟಲ್ ಟ್ರುತ್’ ಎನ್ನುವ ಹಿಂದಿ ಕಿರುಚಿತ್ರದ ಶೂಟಿಂಗ್ ಈಗಾಗಲೇ ಮುಗಿಸಿದ್ದು. ಒಟಿಟಿ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಬಿತ್ತರಿಸಲಾಗುವುದು.